Select Your Language

Notifications

webdunia
webdunia
webdunia
webdunia

ಏಳು ಸೆಕೆಂಡುಗಳಲ್ಲಿ ಒಂದು ಗ್ಲಾಸ್ ಬಿಯರ್ ಕುಡಿದ ಆಸ್ಟ್ರೇಲಿಯಾ ಪ್ರಧಾನಿ

ಏಳು ಸೆಕೆಂಡುಗಳಲ್ಲಿ ಒಂದು ಗ್ಲಾಸ್ ಬಿಯರ್ ಕುಡಿದ ಆಸ್ಟ್ರೇಲಿಯಾ  ಪ್ರಧಾನಿ
ಸಿಡ್ನಿ , ಸೋಮವಾರ, 20 ಏಪ್ರಿಲ್ 2015 (11:33 IST)
ಆಸ್ಟ್ರೇಲಿಯಾ ಪ್ರಧಾನಮಂತ್ರಿ ಟೋನಿ ಅಬಾಟ್ ಕೇವಲ ಏಳು ಸೆಕೆಂಡುಗಳಲ್ಲಿ ಒಂದು ಗ್ಲಾಸ್ ಬೀಯರ್ ಕುಡಿದ ದೃಶ್ಯ ಈಗ ಚರ್ಚೆಯ ವಸ್ತುವಾಗಿದೆ. ಆಸ್ಟ್ರೇಲಿಯಾದ ರೂಲ್ಸ್ ಫುಟ್ಬಾಲ್ ತಂಡದ ಜೊತೆ ಸಿಡ್ನಿಯ ಬಾರ್‌ನಲ್ಲಿದ್ದ ಅಬಾಟ್ ಸ್ಕೂನರ್ ಎಂದು ಕರೆಯುವ ಬಿಯರ್ ಅನ್ನು ಕೇವಲ ಏಳು ಸೆಕೆಂಡುಗಳಲ್ಲಿ ಖಾಲಿ ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ಕ್ಯಾಮರಾ ಸೆರೆಹಿಡಿದಿದೆ. 
 
ಅಷ್ಟೊಂದು ಸೂಪರ್ ಫಾಸ್ಟ್‌ ಅವಧಿಯಲ್ಲಿ  ಬಿಯರ್ ಕುಡಿದಿದ್ದಕ್ಕೆ ಬಾರ್‌ನಲ್ಲಿದ್ದವರು ಅಬಾಟ್‌ರನ್ನು ಅಭಿನಂದಿಸಿದರು. ಆದರೆ ಈ ಸಾಧನೆ ನಡೆಯುವೆಯೂ ಅಬಾಟ್ ಅವರಿಗೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿಯೊಬ್ಬರ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ಬಾಬ್ ಹಾಕ್  ಎರಡೂವರೆ ಗ್ಲಾಸ್ ಬಿಯರ್ ಅನ್ನು  ಕೇವಲ 11 ಸೆಕೆಂಡುಗಳಲ್ಲಿ ತಮ್ಮ ಹೊಟ್ಟೆಗೆ ಇಳಿಸಿದ್ದರು. 
 
ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಿಯರ್ ಕುಡಿದ ವಿಷಯ ಹರಿದಾಡುತ್ತಿದ್ದು, ಒಂದೇ ಗುಟುಕಿಗೆ ಬಿಯರ್ ಕುಡಿದ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದರೆ, ಮತದಾರರ ನಡುವೆ ಜನಪ್ರಿಯತೆ ಪಡೆಯಲು ಇದೊಂದು ಸ್ಟಂಟ್ ಎಂದು ಕೆಲವರು ಟೀಕಿಸಿದ್ದಾರೆ. 

Share this Story:

Follow Webdunia kannada