Select Your Language

Notifications

webdunia
webdunia
webdunia
webdunia

ಮದುವೆಯಾದ 10 ವರ್ಷದಲ್ಲಿ ಪುರುಷನಲ್ಲ ಮಹಿಳೆ ಎಂದು ಗೊತ್ತಾದಾಗ.....!

ಮದುವೆಯಾದ 10 ವರ್ಷದಲ್ಲಿ ಪುರುಷನಲ್ಲ ಮಹಿಳೆ ಎಂದು ಗೊತ್ತಾದಾಗ.....!
ಚೀನಾ , ಮಂಗಳವಾರ, 29 ಜುಲೈ 2014 (16:51 IST)
ಚೀನಾದ ವೈದ್ಯರು ನೀನು ಪುರುಷನಲ್ಲ ಮಹಿಳೆ ಎಂದು ಹೇಳಿದಾಗ ವ್ಯಕ್ತಿಯೊಬ್ಬ ದಂಗಾಗಿ ಹೋಗಿದ್ದಾನೆ. ಹೊಟ್ಟೆ ನೋವು ಮತ್ತು ಮೂತ್ರದಲ್ಲಿ ರಕ್ತ ಬರುತ್ತಿರುವ ಕಾರಣ 44ವರ್ಷದ ಚಿನ ಎನ್ನುವ ವ್ಯಕ್ತಿ ವೈದ್ಯರ ಹತ್ತಿರ ಹೋಗಿದ್ದಾಗ ತಾನು ಹೆಣ್ಣು ಎಂದು ವೈದ್ಯರು ತಿಳಿಸಿದಾಗ ವ್ಯಕ್ತಿ ದಂಗಾಗಿ ಹೋಗಿದ್ದಾನೆ. 
 
ಶೀಜ್ನಿಯಾಂಗ್ ಪ್ರಾಂತ್ಯದಲ್ಲಿರುವ ವಿವಾಹಿತನಾಗಿದ್ದ 44 ವರ್ಷದ ಚಿನ್ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರಿಂದ ಪತ್ನಿಯ ಜೊತೆಗೆ ಯುಂಗಾಕಾಗ್ನದ ತಮ್ಮ ಸ್ಥಳೀಯ ವೈದ್ಯರ ಹತ್ತಿರ ಹೊಗಿದ್ದಾನೆ. ಆದರೆ ಚಿನ್ ಶರೀರ ಗಂಡಿನದ್ದಲ್ಲ ಬದಲಾಗಿ ಹೆಣ್ಣಿನ್ನದಾಗಿದೆ ಎನ್ನುವ ಸತ್ಯ ಬಹಿರಂಗವಾಗಿದೆ. 
 
ಪೂರ್ಣ ತನಿಖೆಯ ನಂತರ ವೈದ್ಯರು ಚಿನ್ ಶರೀರದಲ್ಲಿ ಮಹಿಳೆಯ ತರಹ ಗುಪ್ತಾಂಗವಿದೆ. ಆದರೆ, ಆತನ ಶರೀರದಲ್ಲಿ ಪುರುಷನ ಅಂಗವಿರುವ ಕಾರಣ 10 ವರ್ಷ ಚಿನ್ ವೈವಾಹಿಕ ಜೀವನದ ಸೆಕ್ಸ್‌ ಲೈಫ್‌ ಉತ್ತಮವಾಗಿಯೇ ಸಾಗಿತ್ತು. 
 
ಆದರೆ, ವೈದ್ಯರ ಈ ಮಾತನ್ನು ಚಿನ್ ಒಪ್ಪುತ್ತಿಲ್ಲ. ವೈದ್ಯರ ಪ್ರಕಾರ ಚಿನ್ ಜನನಾಂಗ ಬೇರೆ ಪುರುಷರಿಗಿಂತ ವಿಭಿನ್ನವಾಗಿದೆ. ಈ ಪ್ರಕಾರವಾಗಿ ಚಿನ್ ಪೂರ್ಣ ಪುರುಷ ಎಂದು ಹೇಳಲಾಗದು. 
 
ಚಿನ್ ಪ್ರಾರಂಭದಿಂದಲು ಮಹಿಳೆಯಾಗಿದ್ದಾನೆ. ಚಿನ್ ಯಾವಾಗಲು ಪುರುಷರ ಬಟ್ಟೆ ತೊಟ್ಟು ಮತ್ತು ಸಣ್ಣ ಕೂದಲು ಬೆಳೆಸಿದ್ದರಿಂದ ಇದರಿಂದ ಚಿನ್ ಪ್ರಾರಂಭದಿಂದ ಮಹಿಳೆಯಲ್ಲ ಪುರುಷ ಎಂದು ಅನಿಸುತ್ತದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. 
 
ನಾನು ಹಲವು ದಿನಗಳಿಂದ ಆರೋಗ್ಯವಾಗಿಲ್ಲ ಎಂದು ಅನಿಸುತ್ತಿತ್ತು. ಹಲವು ದಿನಗಳಿಂದ ನನ್ನ ಮುಖದ ಮೇಲೆ ಮತ್ತು ಕಾಲಿನಲ್ಲಿ ಉರಿಯಿತ್ತು, ಈ ಕಾರಣ ನಾನು ತುಂಬಾ ಸುಸ್ತಾಗಿ ಇರುತ್ತಿದ್ದೆ. ಇದರ ನಂತರ ಮೂತ್ರದಲ್ಲಿ ರಕ್ತ ಕೂಡ ಕಾಣಿಸಿಕೊಂಡಿದೆ ಎಂದು ಚಿನ್ ತಿಳಿಸಿದ್ದಾನೆ. 
 
ಸಿಟಿ ಸ್ಕ್ಯಾನ್‌‌‌ನಿಂದ ಚಿನ್ ಶರೀರದಲ್ಲಿ ಗರ್ಭಾಶಯ ಮತ್ತು ಓವರಿ ಇರುವುದು ಪತ್ತೆಯಾಗಿದೆ. ಚಿನ್ ಹುಟ್ಟಿನಿಂದ ಕಿಡ್ನಿಯಲ್ಲಿ ವೃದ್ದಿ ( ಕಾಜ್ನೆಟ್ನಲ್‌ ಅಡ್ರಿನಲ್‌ ಹಾಯಿಪರ್‌ಲೆಸಿಯಾ) ತೊಂದರೆ ಇದೆ. ಈ ಅನುವಂಶಿಕ ರೋಗದ ಕಾರಣ ಚಿನ್ ಶರೀರದಲ್ಲಿ ಪುರುಷರ ಹಾರ್ಮೋನ್ಸ್‌ನಲ್ಲಿ ವೃದ್ದಿಯಾಗುತ್ತಿದ್ದವು. 
 
ನಿಶ್ಚಿತ ರೂಪದಲ್ಲಿ ಚಿನ್ ಇಂಟರ್‌ಸೆಕ್ಸ್‌ ಅಥವಾ ಉಭಯಲಿಂಗ (ಹಮೊಫ್ರೆಡಾಯಿಟ್‌‌) ಇರಬಹುದೆಂದು ನಾವು ಹೇಳಲಾಗುವುದಿಲ್ಲ ಎಂದು ವೈದ್ಯರ ತಂಡ ತಿಳಿಸಿದೆ. ಆದರೆ ಇತನ ಶರೀರದಲ್ಲಿ ಎರಡೂ ತರಹದ ಜನನಾಂಗ ಇದೆ ಎರುವುದು ಸತ್ಯವಾಗಿದೆ. 
 
ಯಾವುದೇ ಮೆಡಿಕಲ್‌ ಚಿಕಿತ್ಸೆ ಮಾಡಬೇಕೆಂದರೆ ಈಗ ಸಾಕಷ್ಟು ಸಮುಯವಾಗಿದೆ. ಈ ತರಹದ ಕೇಸಗಳಿಗೆ ಕಡಿಮೆ ವಯಸ್ಸಿನಲ್ಲಿಯೆ ಚಿಕಿತ್ಸೆ ನೀಡಿದರೆ ಪರಿಹಾರವಾಗುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. 

Share this Story:

Follow Webdunia kannada