Webdunia - Bharat's app for daily news and videos

Install App

ಅಮೆರಿಕದ ಸೆನೆಟ್ ಸದಸ್ಯರಿಂದ ಎಚ್-1ಬಿ ವೀಸಾ ಟೀಕೆ

Webdunia
ಶನಿವಾರ, 27 ಫೆಬ್ರವರಿ 2016 (14:56 IST)
ಅಮೆರಿಕದ ಉನ್ನತ ಸಂಸತ್ ಸದಸ್ಯರು ಶುಕ್ರವಾರ ಜನಪ್ರಿಯ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಕುರಿತು ತರಾಟೆಗೆ ತೆಗೆದುಕೊಂಡರು.  ಕಂಪನಿಗಳು ಎಚ್-1ಬಿ ವೀಸಾ ಕಾರ್ಯಕ್ರಮವನ್ನು ದುರುಪಯೋಗ ಮಾಡಿಕೊಂಡು ಅಮೆರಿಕನ್ನರ ಬದಲಿಗೆ ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಂದ ಕಡಿಮೆ ವೇತನಕ್ಕೆ ವಿದೇಶಿ ನೌಕರರನ್ನು ಬದಲಿಸುತ್ತಿವೆಯೆಂದು ಅವರು ಟೀಕಿಸಿದರು. 
 
ವಾಸ್ತವವೇನೆಂದರೆ ಅರ್ಹತೆ ಹೊಂದಿದ ಅಮೆರಿಕದ ನೌಕರರಿದ್ದೂ ಕೂಡ ಸಾವಿರಾರು ಅಮೆರಿಕ ನೌಕರರಿಗೆ ಬದಲಿಗೆ ವಿದೇಶಿ ಕಾರ್ಮಿಕರನ್ನು ನೇಮಿಸಲಾಗುತ್ತಿದೆ ಎಂದು ಸೆನೆಟ್ ಸದಸ್ಯ ಜೆಫ್ ಸೆಷನ್ಸ್ ಸಂಸತ್ತಿನ ಕಲಾಪದಲ್ಲಿ ಆರೋಪಿಸಿದರು. 
 
ಅಮೆರಿಕದಲ್ಲಿ ಕುಶಲ ಕಾರ್ಮಿಕರ ಕೊರತೆಯಿದ್ದು, ಅದಕ್ಕಾಗಿ ಅರ್ಹ ವಿದೇಶಿ ನೌಕರರನ್ನು ಭಾರತದಿಂದ ತರಲಾಗುತ್ತಿದೆ ಎಂಬ ಅನೇಕ ಅಮೆರಿಕ ಕಂಪನಿಗಳ ವಾದವನ್ನು ಸೆಷನ್ಸ್ ನಿರಾಕರಿಸಿದರು.
 
ಉನ್ನತ ವಿದ್ಯಾಭ್ಯಾಸ ಪಡೆದ ಅಮೆರಿಕದ ವೃತ್ತಿಪರರ ಕೊರತೆಯಿಲ್ಲವೆಂದು ದತ್ತಾಂಶ ತೋರಿಸುತ್ತಿದೆ. ಇದಲ್ಲದೇ ಅಮೆರಿಕದ ಸ್ಟೆಮ್ ಕಾಲೇಜು( ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪದವೀಧರರ ಕೊರತೆಯಿಲ್ಲ ಎನ್ನುವುದನ್ನು ದತ್ತಾಂಶ ತೋರಿಸುತ್ತದೆ ಎಂದು ಹೇಳಿದರು. 
 
ವಲಸೆ ವೀಸಾ ಕಾರ್ಯಕ್ರಮವು ಅಮೆರಿಕದ ನೌಕರರ ಶಕ್ತಿಗೆ ಪೂರಕವಾಗಿರಬೇಕು, ಪ್ರಸಕ್ತ ಕಾನೂನುಗಳು ಅಮೆರಿಕದ ನೌಕರರಿಗೆ ಅನನುಕೂಲವಾಗುವಂತೆ ದುರುಪಯೋಗ ಮಾಡದಂತೆ ನಾವು ಖಾತರಿಪಡಿಸಬೇಕು ಎಂದು ಹೇಳಿದರು. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments