Select Your Language

Notifications

webdunia
webdunia
webdunia
webdunia

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!
ಇಸ್ಲಾಮಾಬಾದ್ , ಗುರುವಾರ, 27 ಜುಲೈ 2017 (10:31 IST)
ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ಅದಕ್ಕಿಂತಲೂ ಹೇಯ ಕೃತ್ಯವೊಂದು  ನಡೆದಿದೆ. ಅದೂ ಪಂಚಾಯಿತಿ ಕಟ್ಟೆಯ ‘ನ್ಯಾಯ’ ತೀರ್ಮಾನದಂತೆ!


ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಅಣ್ಣ ಮಾಡಿದ ಕೃತ್ಯಕ್ಕೆ ಇಲ್ಲಿ ತಂಗಿಗೆ ಘೋರ ಶಿಕ್ಷೆ ನೀಡಲಾಗಿದೆ. 16 ವರ್ಷದ ಬಾಲಕಿಯನ್ನು ಆಕೆಯ ಕುಟುಂಬದವರ ಎದುರಿನಲ್ಲೇ ವ್ಯಕ್ತಿಯೊಬ್ಬನಿಂದ ಅತ್ಯಾಚಾರ ಮಾಡಿಸಲಾಗಿದೆ. ಇದು ಆ ಯುವತಿಯ ಅಣ್ಣ ಈ ವ್ಯಕ್ತಿಯ ಸಹೋದರಿಯ ಮೇಲೆ ಮಾಡಿದ ಅತ್ಯಾಚಾರಕ್ಕೆ ಪಂಚಾಯತ್ ನೀಡಿದ ಶಿಕ್ಷೆಯಂತೆ!

ಆರೋಪಿಯ ಸಹೋದರಿಗೇ ‘ಇಂತಹದ್ದೊಂದು’ ಶಿಕ್ಷೆ ನೀಡಿದರಷ್ಟೇ ಆರೋಪಿಗೂ ತನ್ನ ತಪ್ಪಿನ ಅರಿವಾಗುತ್ತದೆ ಎಂಬುದು ಪಂಚಾಯಿತಿ ಕಟ್ಟೆಯ ತೀರ್ಮಾನವಾಗಿತ್ತಂತೆ. ಘಟನೆ ನಡೆದ ಎರಡು ದಿನಗಳ ಬಳಿಕ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಇದೀಗ ಪೊಲೀಸರು ಪಂಚಾಯಿತಿ ಮುಖ್ಯಸ್ಥ ಸೇರಿದಂತೆ 20 ಜನರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧ ದಿನ ಮಾಜಿ ಸಿಎಂ ಆಗಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್!