Select Your Language

Notifications

webdunia
webdunia
webdunia
webdunia

560,000 ವರ್ಷ ಪ್ರಾಚೀನ ಹಲ್ಲನ್ನು ಪತ್ತೆ ಮಾಡಿದ ಫ್ರೆಂಚ್ ಬಾಲಕಿ

560,000 ವರ್ಷ ಪ್ರಾಚೀನ ಹಲ್ಲನ್ನು ಪತ್ತೆ ಮಾಡಿದ ಫ್ರೆಂಚ್ ಬಾಲಕಿ
ಟೊಲೌಸ್ , ಮಂಗಳವಾರ, 28 ಜುಲೈ 2015 (21:09 IST)
16 ವರ್ಷ ವಯಸ್ಸಿನ ಫ್ರೆಂಚ್  ಸ್ವಯಂಸೇವೆಯ  ಪುರಾತತ್ವ ಶೋಧಕಿ 560,000 ವರ್ಷಗಳಷ್ಟು ಪ್ರಾಚೀನವಾದದ್ದೆಂದು ಹೇಳಲಾದ ಹಲ್ಲೊಂದನ್ನು ನೈರುತ್ಯ ಫ್ರಾನ್ಸ್‌ನಲ್ಲಿ ಪತ್ತೆ ಮಾಡಿದ್ದು ಸಂಶೋಧಕರು ಇದನ್ನು ಪ್ರಮುಖ ಶೋಧನೆ ಎಂದು ಶ್ಲಾಘಿಸಿದ್ದಾರೆ. 
 
 
ವಯಸ್ಕರ ಹಲ್ಲು ಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿದ್ದು  ವಿವಿಧ ಡೇಟಿಂಗ್ ವಿಧಾನಗಳ ಮೂಲಕ ಇದು 550,000 ಮತ್ತು 580,000 ವರ್ಷಗಳಷ್ಟು ಪ್ರಾಚೀನವಾದದ್ದು ಎಂದು ಪುರಾತತ್ವ ಶಾಸ್ತ್ರಜ್ಞ ಅಮೇಲಿ ವಿಯಾಲೆಟ್ ಹೇಳಿದ್ದಾರೆ. 
 
ಟುಟಾವೆಲ್ ಇತಿಹಾಸ ಪೂರ್ವ ಸ್ಥಳದಲ್ಲಿ ಈ ಹಲ್ಲು ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಸುಮಾರು 50 ವರ್ಷಗಳಿಂದ ಉತ್ಖನನ ನಡೆಸಲಾಗುತ್ತಿದೆ.  ಸುಮಾರು 450,000 ವರ್ಷಗಳಷ್ಟು ಹಿಂದೆ ವಾಸಿಸಿದ್ದ ಟುಟಾವೆಲ್ ಮಾನವನ ಅವಶೇಷ ಕೂಡ ಇದೇ ಸ್ಥಳದಲ್ಲಿ ಪತ್ತೆಯಾಗಿತ್ತು. 

Share this Story:

Follow Webdunia kannada