Select Your Language

Notifications

webdunia
webdunia
webdunia
webdunia

ಫ್ರಾನ್ಸ್ ಉಗ್ರರ ದಾಳಿ: 84 ಜನರ ಹತ್ಯೆ, 100ಕ್ಕೂ ಹೆಚ್ಚು ಜನರಿಗೆ ಗಾಯ

ಫ್ರಾನ್ಸ್ ಉಗ್ರರ ದಾಳಿ: 84 ಜನರ ಹತ್ಯೆ, 100ಕ್ಕೂ ಹೆಚ್ಚು ಜನರಿಗೆ ಗಾಯ
ನೈಸ್(ಫ್ರಾನ್ಸ್) , ಶುಕ್ರವಾರ, 15 ಜುಲೈ 2016 (16:14 IST)
ಫ್ರೆಂಚ್ ನದಿ ತಡದ ಮೇಲಿರುವ ನೈಸ್ ನಗರದಲ್ಲಿ ಬಾಸ್ಟಿಲ್ಲೆ ಡೇ ಸಂಭ್ರಮಾಚರಿಸುತ್ತಿರುವ ಸಂದರ್ಭದಲ್ಲಿ ಸಶಸ್ತ್ರಧಾರಿ ಚಾಲಕ ಭಾರಿ ಟ್ರಕ್‌‌ನ್ನು ವೇಗವಾಗಿ ಚಲಾಯಿಸಿ 84 ಮುಗ್ದ ಜನರ ಸಾವಿಗೆ ಕಾರಣವಾದ ಹೇಯ ಘಟನೆ ವರದಿಯಾಗಿದೆ.
 
ಘಟನೆಯಲ್ಲಿ 84 ಜನರು ಸಾವನ್ನಪ್ಪಿದ್ದು 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಬೀರವಾಗಿದೆ ಎಂದು ಫ್ರಾನ್ಸ್ ಅಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
 
ಭಯೋತ್ಪಾದಕ ಟ್ರಕ್ ಚಾಲಕ ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸರು ಆತನನ್ನು ಹೊಡೆದುರುಳಿಸಿದ್ದಾರೆ. 
 
ಪೊಲೀಸರು ಉಗ್ರನ ಮೇಲೆ ಗುಂಡಿನ ದಾಳಿ ನಡೆಸಿದಾಗ ಸಾಯುವ ಮುನ್ನ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಭಯೋತ್ಪಾದಕನನ್ನು ಟುನಿಶಿಯನ್ ಮೂಲದ 31 ವರ್ಷ ವಯಸ್ಸಿನ ಫ್ರೆಂಚ್ ನಾಗರಿಕ ಎಂದು ಗುರುತಿಸಲಾಗಿದೆ. 
 
ಕಳೆದ ಬಾರಿ ಪ್ಯಾರಿಸ್‌ ನಗರದಲ್ಲಿ ಉಗ್ರರು ದಾಳಿ ಮಾಡಿ 130 ಜನರನ್ನು ಹತ್ಯೆ ಮಾಡಿದ ನಂತರ ರಾಷ್ಟ್ರಪತಿ ಫ್ರಾಂಕೋಯಿಸ್ ಹೊಲ್ಲಾಂಡೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಇದೀಗ ಬ್ಯಾಸ್ಟಿಲ್ಲೆ ಸಂಭ್ರಮಾಚರಣೆಗಾಗಿ ಕೆಲವು ಗಂಟೆಗಳ ಕಾಲ ತುರ್ತುಪರಿಸ್ಥಿತಿಯನ್ನು ಹಿಂಪಡೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದ ಐಎಎಸ್ ಅಧಿಕಾರಿ ಜೈಲಿಗೆ