Select Your Language

Notifications

webdunia
webdunia
webdunia
webdunia

ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ವಿಧಿವಶ

ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ವಿಧಿವಶ
ಕಠ್ಮಂಡು , ಮಂಗಳವಾರ, 9 ಫೆಬ್ರವರಿ 2016 (12:12 IST)
ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಸೋಮವಾರ ಮಧ್ಯರಾತ್ರಿ 12.50ಕ್ಕೆ ವಿಧಿವಶರಾಗಿದ್ದಾರೆ. 77 ವರ್ಷದ ಸುಶೀಲ್ ಕೊಯಿರಾಲ  ಕಠ್ಮಂಡುವಿನಲ್ಲಿರುವ ತಮ್ಮ ಮಹಾರಾಜ್‌ಗಂಜ್ ನಿವಾಸದಲ್ಲಿ  ಕೊನೆಯುಸಿರೆಳೆದಿದ್ದಾರೆ.

 
ಕೊಯಿರಾಲ ದೀರ್ಘಕಾಲದಿಂದ ಶ್ವಾಸಕೋಶದ ಕಾಯಿಲೆಯಿಂದ (COPD) ನರಳುತ್ತಿದ್ದರು ಎಂದು ತಿಳಿದು ಬಂದಿದೆ. 
 
ಫೆಬ್ರವರಿ 10, 2014ರಲ್ಲಿ ನೇಪಾಳದ  ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು 2015ರ ಅಕ್ಟೋಬರ್‌‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 
 
ಭಾರತದ 1939 ಅಗಸ್ಟ್ 12 ರಂದು ಬನಾರಸ್‌ನಲ್ಲಿ ಜನಿಸಿದ್ದ ಇವರು ನೇಪಾಳದ ಮಾಜಿ ಪ್ರಧಾನಿಗಳಾದ ಮಾತ್ರಿಕಾ ಪ್ರಸಾದ್ ಕೊಯಿರಾಲಾ, ಗಿರಿಜಾ ಪ್ರಸಾದ್ ಕೊಯಿರಾಲಾ ಮತ್ತು ಬಿಶ್ವೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಸಂಬಂಧಿಯಾಗಿದ್ದಾರೆ.  
1954ರಲ್ಲಿ ರಾಜಕೀಯ ಪ್ರವೇಶಿಸಿದ್ದ ಇವರು 16 ವರ್ಷಗಳ ಕಾಲ ಭಾರತದಲ್ಲಿದ್ದರು. 1973ರಲ್ಲಿ ವಿಮಾನ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ ಇವರು 3ವರ್ಷಗಳ ಕಾಲ ಭಾರತದಲ್ಲಿ ಜೈಲುವಾಸವನ್ನು ಕಂಡಿದ್ದರು.
 
ಕೊಯಿರಾಲಾ ನಿಧನಕ್ಕೆ ಪ್ರಧಾನಿ ಮೋದಿ ಶೋಕ ವ್ಯಕ್ತ ಪಡಿಸಿದ್ದಾರೆ.
 

Share this Story:

Follow Webdunia kannada