Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ಮಾಜಿ ಬಿಷಪ್‌ಗೆ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ಮಾಜಿ ಬಿಷಪ್‌ಗೆ ಜೈಲು ಶಿಕ್ಷೆ
ಲಂಡನ್ , ಗುರುವಾರ, 8 ಅಕ್ಟೋಬರ್ 2015 (19:01 IST)
ಅಪ್ರಾಪ್ತ ವಯಸ್ಕರು ಮತ್ತು ಯುವಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮಾಜಿ ಆಂಗ್ಲಿಕನ್ ಬಿಷಪ್ ಅವರಿಗೆ ಬುಧವಾರ ಜೈಲು ಶಿಕ್ಷೆ ವಿಧಿಸಲಾಗಿದೆ. ಸುಮಾರು 20 ವರ್ಷಗಳ ನಂತರ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ತಿಳಿಸಿದೆ.  ಆ ಸಂದರ್ಭದಲ್ಲಿ ಬಿಷಪ್ ಪರ ಬ್ರಿಟನ್ ಪ್ರಭಾವಶಾಲಿ ಗಣ್ಯ ವ್ಯಕ್ತಿಗಳು ಬೆಂಬಲವಾಗಿ ನಿಂತಿದ್ದರು ಹಾಗೂ ಅವರ ವಿರುದ್ಧ ಆರೋಪ ಹೊರಿಸಿರಲಿಲ್ಲ.
 
ಲೀವಿಸ್ ಮಾಜಿ ಬಿಷಪ್ ಆಗಿದ್ದ ಪೀಟರ್ ಬಾಲ್  ಸಾರ್ವಜನಿಕ ಕಚೇರಿಯಲ್ಲಿ ದುರ್ವರ್ತನೆ ಮತ್ತು ಅಶ್ಲೀಲ ಲೈಂಗಿಕ ದೌರ್ಜನ್ಯದ ಆರೋಪವನ್ನು ಕಳೆದ ತಿಂಗಳು ಒಪ್ಪಿಕೊಂಡರು. 1970 ಮತ್ತು 1990ರ ಅವಧಿಯಲ್ಲಿ ಅವರು ಸುಮಾರು 18 ದುರ್ದೈವಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇವರೆಲ್ಲರೂ ಧರ್ಮನಿಷ್ಠ ಯುವಕರು ಅಥವಾ ಧರ್ಮಗುರು ಆಕಾಂಕ್ಷಿಗಳಾಗಿದ್ದರು. 
 
1992ರಲ್ಲಿ ಮೊದಲ ಬಲಿಪಶು ಮುಂದೆ ಬಂದು ಬಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ. ಆದರೆ ಈಗ 83 ವರ್ಷವಾಗಿರುವ ಬಾಲ್ ಆರೋಪವನ್ನು ಅಲ್ಲಗಳೆದಿದ್ದರು.  ರಾಜಕುಟುಂಬದ ಅಜ್ಞಾತ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡುತ್ತಿದ್ದರು ಮತ್ತು ಬೆಂಬಲದ ಪತ್ರವನ್ನು ನೀಡಿದ್ದರು.  ಆದರೆ ಇನ್ನೂ ಅನೇಕ ಮಂದಿ ಲೈಂಗಿಕ ದೌರ್ಜನ್ಯಕ್ಕೀಡಾದವರು ದೂರು ನೀಡಿದ ಎಳಿಕ ಪೊಲೀಸರು 2012ರಲ್ಲಿ ಪ್ರಕರಣವನ್ನು ಮರುತೆರೆದರು.
 

Share this Story:

Follow Webdunia kannada