Webdunia - Bharat's app for daily news and videos

Install App

ಪ್ಯಾರೀಸ್ ಬೀದಿಗಳಲ್ಲಿ ಹೆಣ ತುಂಬುವುದಾಗಿ ಪಣತೊಟ್ಟ ಐಸಿಸಿ ಉಗ್ರಗಾಮಿ

Webdunia
ಶನಿವಾರ, 25 ಜುಲೈ 2015 (20:01 IST)
ಫ್ರೆಂಚ್ ಐಸಿಸ್ ಉಗ್ರಗಾಮಿಯೊಬ್ಬ ಪ್ಯಾರಿಸ್ ಬೀದಿಗಳಲ್ಲಿ ಹೆಣಗಳನ್ನು ತುಂಬುವುದಾಗಿ  ಪಣ ತೊಟ್ಟಿದ್ದಾನೆ. ಸಿರಿಯಾದ ಸೈನಿಕನೊಬ್ಬನ ತಲೆಯ ಹಿಂಭಾಗಕ್ಕೆ ಗುಂಡು ಹೊಡೆದ ಮುಖವಾಡ ಧರಿಸಿದ್ದ ಐಸಿಸ್ ಉಗ್ರಗಾಮಿ ಬಳಿಕ ಶವವನ್ನು ಕಂದಕದಿಂದ ತಳ್ಳುವುದಕ್ಕೆ  ಮುಂಚೆ  ಪ್ಯಾರಿಸ್ ಬೀದಿಗಳಲ್ಲಿ ಹೆಣಗಳನ್ನು ತುಂಬುವುದಾಗಿ ಶಪಥ ತೊಟ್ಟ.

  ಮರಣದಂಡನೆ ವೀಡಿಯೊವನ್ನು ದಾಖಲಿಸಲು ಅಧಿಕ ಸ್ಪಷ್ಟತೆಯ ಕ್ಯಾಮರಾ ಬಳಸಿದ್ದ ಉಗ್ರಗಾಮಿ ಸ್ಪಷ್ಟ ಫ್ರೆಂಚ್ ಭಾಷೆಯಲ್ಲಿ ಮಾತನಾಡುತ್ತಾ ನೀವು ಜೀವನವನ್ನು ಪ್ರೀತಿಸುವ ರೀತಿಯಲ್ಲಿ ಐಸಿಸ್ ಸಾವನ್ನು ಪ್ರೀತಿಸುತ್ತದೆ ಎಂದು ಉದ್ಗರಿಸುತ್ತಾ, ಐರೋಪ್ಯ ದೇಶದಲ್ಲಿ ಮತ್ತಷ್ಟು ಭಯೋತ್ಪಾದಕ ದಾಳಿಗಳನ್ನು ನಡೆಸುವುದಾಗಿ ಘೋಷಿಸಿದ. 
 
 ಇಂದಿನ ವಿಡಿಯೋವನ್ನು ಸಿರಿಯಾದ ಹಾಮಾ ಪ್ರಾಂತ್ಯದ ಐಸಿಸ್ ಕೈವಶದ ಪ್ರದೇಶದಲ್ಲಿ ಚಿತ್ರೀಕರಿಸಿಕೊಂಡು ಭಯೋತ್ಪಾದನೆ ಗುಂಪಿನ ಪ್ರಚಾರ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 
 
ನಿರ್ಜನ ಕಂದಕವೊಂದರ ಮೇಲ್ಭಾಗದಲ್ಲಿ ನಿಂತಿದ್ದ ಜಿಹಾದಿ ಮಂಡಿಯೂರಿ ಕುಳಿತಿದ್ದ ಸಿರಿಯಾ ಸೇನಾಧಿಕಾರಿ ತಲೆಗೆ ಪಿಸ್ತೂಲು ಹಿಡಿದು ತಾನು ಜಿಹಾದ್ ಹೋರಾಟದಲ್ಲಿರುವ 500 ಫ್ರೆಂಚ್ ಪೌರರ ಪೈಕಿ ಒಬ್ಬ ಎಂದು ಹೇಳಿದ್ದಾನೆ. ಫ್ರೆಂಚ್ ಪೌರರಿಗೆ ಮಾತ್ರವಲ್ಲದೇ  ಅಲ್ಲಾ ಮತ್ತು ಪ್ರವಾದಿ ವಿರುದ್ಧ ಹೋರಾಟ ಮಾಡುವ ಎಲ್ಲರಿಗೂ ಈ ಸಂದೇಶವನ್ನು ಗುರಿಯಿರಿಸಲಾಗಿದೆ ಎಂದು ಘೋಷಿಸಿದ.
 
ತನ್ನ ಮಾತನ್ನು ಮುಗಿಸಿದ ಕೂಡಲೇ ಫ್ರೆಂಚ್ ಉಗ್ರ ನಿರ್ದಯವಾಗಿ ತನ್ನ ಬಂದೂಕಿನಿಂದ ಸಿರಿಯಾ ಸೈನಿಕನ ತಲೆಗೆ ಗುಂಡು ಹಾರಿಸಿ ಶವವನ್ನು ಕಂದಕದಿಂದ ಕೆಳಕ್ಕೆ ಒದ್ದು, ಅದು ಹತ್ತಾರು ಅಡಿ ಕೆಳಕ್ಕೆ ಉರುಳಿ ಕಲ್ಲಿನ ಮೇಲೆ ಬೀಳುತ್ತದೆ.  ಬಳಿಕ ರಕ್ತಲೇಪಿತವಾದ ಮೃತದೇಹದ ಹತ್ತಿರ ಭಯೋತ್ಪಾದಕ ನಿಂತಿರುವ ಫೂಟೇಜ್ ತೋರಿಸಲಾಗಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments