Webdunia - Bharat's app for daily news and videos

Install App

ಈ ಹೋರಿಯ ಭಾರ ಕೇಳಿದ್ರೆ ನೀವು ಹುಬ್ಬೇರಿಸ್ತಿರಾ...!

Webdunia
ಶನಿವಾರ, 22 ಅಕ್ಟೋಬರ್ 2016 (09:48 IST)

ಬ್ರಿಟನ್: ಒಂದು ಹೋರಿ(ಎತ್ತು) ಅಬ್ಬಬ್ಬಾ.... ಎಂದರೆ ಎಷ್ಟು ಕಿ.ಲೋ ಇರಬಹುದು. 300, 5000, ಬೇಡ 1000. ಉಹೂಂ...! ಇಷ್ಟಿದ್ದರೇ ನಾವು ಹುಬ್ಬೇರಿಸುತ್ತೇವೆ. ಆದರೆ ಇಲ್ಲೊಂದು ಹೋರಿ ಬರೋಬ್ಬರಿ 1,750 ಕಿ.ಲೋಗಳಿಷ್ಟು ಎಲ್ಲರನ್ನು ಆಶ್ಚರ್ಯ ಚಕಿತಗೊಳಿಸುತ್ತಿದೆ.
 


 

ಹೌದು. ಈ ಹೋರಿ ಹೆಸರು ಬ್ರಿಟನ್ ನಲ್ಲಿದ್ದು, ಫೀಲ್ಡ್ ಮಾರ್ಷಲ್ ಎಂದು ಹೆಸರು ಪಡೆದಿದೆ. ಜಗತ್ತಿನಲ್ಲಿಯೇ ಇಷ್ಟೊಂದು ಭಾರವಾದ ಹೋರಿ ಇನ್ನೊಂದಿಲ್ಲ ಎನ್ನುವ ಹೆಗ್ಗಳಿಕೆ ಇದರದ್ದು. ಜತೆಗೆ, ಒಬ್ಬ ಸಾಮಾನ್ಯ ಮನುಷ್ಯನಿಗಿಂತಲೂ ಹೆಚ್ಚು, ಆರು ಅಡಿ ಏಳು ಇಂಚು ಎತ್ತರ ಹೊಂದಿದ್ದು ಮತ್ತೊಂದು ಗರಿಮೆ ಈ ಫೀಲ್ಡ್ ಮಾರ್ಷಲ್ ಮುಡಿಗೆ.
 

2005ರಲ್ಲಿ ಜನಿಸಿದ ಈ ಹೋರಿ ಹೋಲ್-ಸ್ಟೆನ್ ತಳಿಗೆ ಸೇರಿದ್ದಾಗಿದೆ. ಬ್ರಿಟನ್ ನ ಅರ್ಥರ ಡಕ್ಕೆಟ್ ಎಂಬ ವೃದ್ಧ ಸಣ್ಣ ಹಿಡುವಳಿ ರೈತ ಇದನ್ನು ಸಾಕಿದ್ದ. ಆತ ಎಂಬತನ ವಯಸ್ಸಿಗೆ ಕಾಲವಾದ ನಂತರ, ಈ ಹೋರಿಯ ಒಡೆತನ ಆತನ ದೂರದ ಸಂಬಂಧಿ ಗ್ಯಾರಿ ಬೌಡೆನ್ ಎಂಬವರಿಗೆ ಸೇರಿತು. ಅವರು ಡಲ್ ಹೋರ್ನ್ ಎಂಬಲ್ಲಿ ಕೃಷಿ ಫಾರ್ಂ ಮಾಡುತ್ತಿದ್ದು, ಫೀಲ್ಡ್ ಮಾರ್ಷಲ್ ಇಲ್ಲಿ ಬಂದುದ್ದರಿಂದ ಅದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
 

ಈ ದೈತ್ಯ ಹೋರಿಯ ಆಹಾರ ಪ್ರಮಾಣವೂ ಸಣ್ಣದೇನಲ್ಲ. ದಿನಕ್ಕೆ ಹದಿನೇಳು ಕೆಜಿ ಪಶು ಆಹಾರ ಬೇಕೆ ಬೇಕು. ಬಳಿಕ ಓಟ್ಸ್, ಬಾರ್ಲಿಯಂಥ ಧಾನ್ಯಗಳು, ಆಲೂಗಡ್ಡೆ ಮತ್ತು ಹಸಿರು ಮೇವಿನ ಭರ್ಜರಿ ಭೋಜನ ನೀಡಬೇಕಾಗುತ್ತದೆ. ಈಗಾಗಲೇ ಈ ಫೀಲ್ಡ್ ಮಾರ್ಷಲ್ ಅನೇಕ ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿ ಜತೆಗೆ ನಗದು ಬಹುಮಾನವನ್ನು ಪಡೆದುಕೊಂಡಿದ್ದಾನೆ ಎನ್ನುವುದು ವಿಶೇಷ.
 

ದಾಖಲೆ ಪ್ರಕಾರ ಈ ಹಿಂದೆ ಬ್ರಿಟನ್ ನಲ್ಲಿಯೇ ಒಂದು ಹೋರಿ, 1830 ಕೆಜಿಯಿತ್ತು. ಅದೇ ಜಗತ್ತಿನ ಅತಿ ಭಾರವಾದ ಹೋರಿಇಯ ಕೀರ್ತಿಗೆ ದಾಖಲಾಗಿತ್ತು. ಆ ದಾಖಲೆಯನು ಸಹ 11 ವರ್ಷದ ಈ ಫೀಲ್ಡ್ ಮಾರ್ಷಲ್ ಮುರಿಯುತ್ತಾನೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments