Select Your Language

Notifications

webdunia
webdunia
webdunia
webdunia

ಟ್ವಿಟರ್ ಸಿಇಒ ಜಾಕ್ ಡಾರ್ಸಿ, ಫೇಸ್ ಬುಕ್ ಜಕರ್‌ಬರ್ಗ್‌ಗೆ ಐಸಿಸ್ ಜೀವ ಬೆದರಿಕೆ

ಟ್ವಿಟರ್ ಸಿಇಒ ಜಾಕ್ ಡಾರ್ಸಿ, ಫೇಸ್ ಬುಕ್ ಜಕರ್‌ಬರ್ಗ್‌ಗೆ ಐಸಿಸ್ ಜೀವ ಬೆದರಿಕೆ
ಲಂಡನ್ , ಗುರುವಾರ, 25 ಫೆಬ್ರವರಿ 2016 (18:09 IST)
ಸಿರಿಯಾ ಮತ್ತು ಇರಾಕ್‌ನಲ್ಲಿ ಭಯೋತ್ಪಾದನೆಯ ಅಟ್ಟಹಾಸ ಮೆರೆದಿರುವ ಐಸಿಸ್ ಸಂಘಟನೆಯು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಮತ್ತು ಟ್ವಿಟರ್ ಸಿಇಒ ಜಾಕ್ ಡಾರ್ಸಿಗೆ  ಜೀವ ಬೆದರಿಕೆ ಒಡ್ಡಿದ್ದು, ಹೊಸ ವಿಡಿಯೊವೊಂದರಲ್ಲಿ  ನಕಲಿ ಬುಲೆಟ್ ರಂಧ್ರಗಳಿಂದ ಜರ್ಜರಿತವಾದ ಅವರ ಫೋಟೋಗಳನ್ನು ತೋರಿಸಿದೆ.  ಭಯೋತ್ಪಾದಕರ ಕಂಟೆಂಟ್‌ಗಳನ್ನು ಸಾಮಾಜಿಕ ಜಾಲ ತಾಣಗಳ ವೆಬ್‌ಸೈಟ್‌ನಲ್ಲಿ ಬ್ಲಾಕ್ ಮಾಡಿದ ಕ್ರಮವನ್ನು ಅವು ಅಣಕವಾಡಿವೆ. 
 
25 ನಿಮಿಷಗಳ ವಿಡಿಯೊವೊಂದರಲ್ಲಿ , ಸಾಮಾಜಿಕ ಜಾಲ ತಾಣಗಳ ದೈತ್ಯಗಳು ಭಯೋತ್ಪಾದನೆ ಉತ್ತೇಜಿಸುವ ತಮ್ಮ ಖಾತೆಗಳ ವೇದಿಕೆಗಳನ್ನು ಅಳಿಸಿಹಾಕುವ ಕ್ರಮದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದೆ.
 
 ವಿಡಿಯೊದ ಕೊನೆಯಲ್ಲಿರುವ ಸ್ಲೈಡ್‌ನಲ್ಲಿ , 
ಫೇಸ್ ಬುಕ್ ಮತ್ತು ಟ್ವಿಟರ್ ಸಂಸ್ಥಾಪಕರಾದ ಮಾರ್ಕ್ ಮತ್ತು ಜಾಕ್‌ಗೆ ಮತ್ತು ಕ್ರುಸೇಡರ್ ಸರ್ಕಾರಕ್ಕೆ, ನೀವು ನಮ್ಮ ಅನೇಕ ಖಾತೆಗಳನ್ನು ಅಮಾನತುಗೊಳಿಸಿದ್ದಾಗಿ ದಿನನಿತ್ಯ ಪ್ರಕಟಿಸಿದ್ದೀರಿ. ನೀವು ಒಂದು ಅಕೌಂಟ್ ರದ್ದುಮಾಡಿದರೆ ನಾವು 10 ಖಾತೆಗಳನ್ನು ತೆರೆಯುತ್ತೇವೆ ಮತ್ತು ನಿಮ್ಮ ಸೈಟ್‌ಗಳನ್ನು ಡಿಲೀಟ್ ಮಾಡಿದ ಬಳಿಕ ನಿಮ್ಮ ಹೆಸರನ್ನು ಅಳಿಸಿಹಾಕುತ್ತೇವೆ.
ಸನ್ಸ್ ಕಲೀಫೇಟ್ ಆರ್ಮಿ 
ಪ್ರತ್ಯೇಕ ಸ್ಲೈಡ್‌ವೊಂದರಲ್ಲಿ, 1000 ಫೇಸ್‌ಬುಕ್ ಖಾತೆಗಳನ್ನು 150 ಫೇಸ್ ಬುಕ್ ಗ್ರೂಪ್‌ಗಳನ್ನು 5000 ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು  ಹ್ಯಾಕ್ ಮಾಡಿದ್ದಾಗಿ ಹೇಳಿಕೊಂಡಿದೆ.

Share this Story:

Follow Webdunia kannada