Select Your Language

Notifications

webdunia
webdunia
webdunia
webdunia

ಕ್ರೀಡಾಂಗಣದಲ್ಲಿಯೇ ಮಹಿಳಾ ಅಭಿಮಾನಿಯೊಂದಿಗೆ ಕಾಮಕೇಳಿ ನಡೆಸಿದ ಇಂಗ್ಲೆಂಡ್ ಫುಟ್ಬಾಲ್ ಆಟಗಾರ

ಕ್ರೀಡಾಂಗಣದಲ್ಲಿಯೇ ಮಹಿಳಾ ಅಭಿಮಾನಿಯೊಂದಿಗೆ ಕಾಮಕೇಳಿ ನಡೆಸಿದ ಇಂಗ್ಲೆಂಡ್ ಫುಟ್ಬಾಲ್ ಆಟಗಾರ
ಲಂಕಾಶೈರ್ , ಸೋಮವಾರ, 20 ಏಪ್ರಿಲ್ 2015 (19:47 IST)
ಕ್ಲಿದೊಕೆ ಫುಟ್ಬಾಲ್ ಕ್ಲಬ್‌‌ನಲ್ಲಿ ಅರೆ-ವೃತ್ತಿಪರ ಫುಟ್ಬಾಲ್ ಆಟಗಾರನಾದ ಜೆ ಹರ್ಟ್‌ಗೆ ತನ್ನ ಮಹಿಳಾ ಅಭಿಮಾನಿಯೊಂದಿಗೆ ತಮಾಷೆ ಮಾಡುವ ಎಂದೆನಿಸಿದೆ. ಆದರೆ, ತಮಾಷೆ ಮಾಡುವ ಸಾಹಸಕ್ಕೆ ಭಾರಿ ಬೆಲೆ ತೆರಬೇಕಾಗಿ ಬಂದಿರುವುದು ವಿಪರ್ಯಾಸ.

ಜೆ ಹರ್ಟ್ ಕ್ರೀಡಾಂಗಣದ ವ್ಯವಸ್ಥಾಪಕರ ಕೊಠಡಿಯಲ್ಲಿ ಕ್ಲಬ್‌ನ ಟೀ-ಶರ್ಟ್ ಮತ್ತು ಟ್ರ್ಯಾಕ್‌ಶೂಟ್ ಧರಿಸಿ ಮಹಿಳಾ ಅಭಿಮಾನಿಯೊಂದಿಗೆ ಸೆಕ್ಸ್ ನಡೆಸಿರುವ ವಿಡಿಯೋ ದೃಶ್ಯಗಳು ಆನ್‌ಲೈನ್‌ನಲ್ಲಿ ಕೋಲಾಹಲ ಮೂಡಿಸಿವೆ.

ಮಾಧ್ಯಮಗಳ ಪ್ರಕಾರ, ಜೆ ಹರ್ಟ್ ತನ್ನ ಅಭಿಮಾನಿಯೊಂದಿಗೆ ಸೆಕ್ಸ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದಾಡಿರುವುದನ್ನು ಕಂಡ ಇಂಗ್ಲೆಂಡ್‌ನ ಲಂಕಾಶೈರ್ ಕ್ಲಬ್‌ ತಂಡ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಕ್ರೀಡಾಂಗಣದಲ್ಲಿರುವ ವ್ಯವಸ್ಥಾಪಕರ ಕೋಣೆಯಲ್ಲಿ ಅಪರಿಚಿತ ಮಹಿಳಾ ಅಭಿಮಾನಿಯೊಂದಿಗೆ ಜೆ ಹರ್ಟ್ ನಡೆಸಿರುವ ವಿಡಿಯೋ ಕ್ಲಬ್‌ ಮಂಡಳಿಗೆ ದೊರೆತ ನಂತರ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.ಆದರೆ, ವಿಡಿಯೋದಲ್ಲಿ ಮಹಿಳಾ ಅಭಿಮಾನಿಯನ್ನು ಗುರುತಿಸಲಾಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.  

ಎರಡು ಮಕ್ಕಳ ತಾಯಿಯಾಗಿರುವ ಜೆ. ಹರ್ಟ್ ಗರ್ಲ್‌ಫ್ರೆಂಡ್, ಬ್ರೆನಿ ಹಿಬರ್ಟ್ ತನ್ನ ಪ್ರಿಯತಮನ ಸೆಕ್ಸ್ ವಿಡಿಯೋ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಸಾಮಾಜಿಕ ತಾಣಗಳಲ್ಲಿ ಜೆ. ಹರ್ಟ್ ಅವರ ವಿಡಿಯೋ ದೃಶ್ಯಗಳನ್ನು ಹಾಕಬಾರದಾಗಿತ್ತು. ಸ್ವಲ್ಪವಾದರೂ ವಿವೇಚನೆ ಬೇಡವೆ. ನನ್ನ ಮಕ್ಕಳು ತುಂಬಾ ಚಿಕ್ಕವರಿದ್ದದು ಒಳ್ಳೆಯದಾಯಿತು. ವಿಡಿಯೋ ನೋಡುವುದಿಲ್ಲ. ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ ಕಿಡಿಗೇಡಿಗಳಿಗೂ ಒಂದು ದಿನ ಇಂತಹದ್ದೆ ಅನುಭವವಾಗುತ್ತದೆ ಎಂದು ಬ್ರೆನಿ ಹಿಬರ್ಟ್ ಗುಡುಗಿದ್ದಾರೆ.

Share this Story:

Follow Webdunia kannada