Select Your Language

Notifications

webdunia
webdunia
webdunia
webdunia

ಧರ್ಮನಿಂದನೆಗಾಗಿ ಬಾಲಕರನ್ನು ಜೈಲಿಗೆ ಹಾಕಿದ ಈಜಿಪ್ಟ್ ಕೋರ್ಟ್

ಧರ್ಮನಿಂದನೆಗಾಗಿ  ಬಾಲಕರನ್ನು ಜೈಲಿಗೆ ಹಾಕಿದ ಈಜಿಪ್ಟ್ ಕೋರ್ಟ್
ಕೈರೋ: , ಶುಕ್ರವಾರ, 26 ಫೆಬ್ರವರಿ 2016 (18:38 IST)
ಭಾರತದಲ್ಲಿ ಅಪ್ರಾಪ್ತ ವಯಸ್ಕ ಬಾಲಕರ ಅಪರಾಧಕ್ಕೆ ಬಾಲಾಪರಾಧಿ ಕೇಂದ್ರದಲ್ಲಿ ಶಿಕ್ಷೆ ವಿಧಿಸಿದರೆ, ಈಜಿಪ್ಟ್‌ನಲ್ಲಿ ಬಾಲಕರನ್ನು ನೇರವಾಗಿ ಜೈಲಿಗೇ ಕಳಿಸಲಾಗುತ್ತದೆ.  ಈಜಿಪ್ಟ್ ಕೊರ್ಟೊಂದು ನಾಲ್ವರು  ಕಾಪ್ಟಿಕ್ ಕ್ರೈಸ್ತ ಶಾಲಾಬಾಲಕರನ್ನು ಧರ್ಮನಿಂದನೆಯ ಆರೋಪದ ಮೇಲೆ 5 ವರ್ಷಗಳ ಕಾಲ ಜೈಲಿಗಟ್ಟಿದೆ.  ಅವರ ಪೈಕಿ ಮೂವರಿಗೆ ಜೈಲು ಶಿಕ್ಷೆ ವಿಧಿಸಿದೆ ಮತ್ತು ಒಬ್ಬನಿಗೆ ಬಾಲಪರಾಧಿ ಕೇಂದ್ರದ ಶಿಕ್ಷೆಗೆ ಗುರಿಮಾಡಿದೆ ಎಂದು ವರದಿಯಾಗಿದೆ.
 
ಕಾಪ್ಟಿಕ್ ಶಿಕ್ಷಕ ಗ್ಯಾಡ್ ಯುಸುಪ್ ಯೌನಾನ್ ಮತ್ತು ಅವರ ಐವರು ವಿದ್ಯಾರ್ಥಿಗಳು ಇಸ್ಲಾಂ ಧರ್ಮವನ್ನು ನಿಂದಿಸಿದ್ದಾರೆಂದು ಮಿನ್ಯಾ ಆಡಳಿತದ ಮುಸ್ಲಿಂ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಈ ನಾಲ್ವರು ಬಾಲಕರ ವಿರುದ್ಧ ಆರೋಪ ಹೊರಿಸಲಾಗಿತ್ತು.  2015ರಲ್ಲಿ ಚರ್ಚ್ ಔಟಿಂಗ್ ಸಂದರ್ಭದಲ್ಲಿ ಯೋನಾನ್ ಮತ್ತು ಅವರ ವಿದ್ಯಾರ್ಥಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪನ್ನು ಅಣಕಿಸಿದ್ದನ್ನು ತೋರಿಸುವ ವಿಡಿಯೋ ಕ್ಲಿಪ್ ಚಿತ್ರೀಕರಣ ಮಾಡಿದ್ದರು.  ಜನವರಿ 30ರಂದು ಯೋನಾನ್ ಅವರಿಗೆ ಧರ್ಮನಿಂದನೆಗಾಗಿ  3ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 
 
ಈಜಿಪ್ಟ್‌ನ 90 ದಶಲಕ್ಷ ಜನಸಂಖ್ಯೆಯಲ್ಲಿ ಕಾಪ್ಟಿಕ್ ಕ್ರೈಸ್ತರು ಶೇ. 10ರಷ್ಟಿದ್ದು, ತಾರತಮ್ಯ ಮತ್ತು ಕಿರುಕುಳದ ದೂರನ್ನು ನೀಡುತ್ತಿದ್ದರು. ಈಜಿಪ್ಟ್ ಕೋರ್ಟ್‌ಗಳು ಇತ್ತೀಚೆಗೆ ಧರ್ಮ ನಿಂದನೆಗಾಗಿ ಅನೇಕ ಮುಸ್ಲಿಂ ಮತ್ತು ಕ್ರೈಸ್ತರಿಗೆ ಶಿಕ್ಷೆ ವಿಧಿಸಿತ್ತು. 
 

Share this Story:

Follow Webdunia kannada