Webdunia - Bharat's app for daily news and videos

Install App

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಮೇಲೆ ಮೊಟ್ಟೆ ಎಸೆತ

Webdunia
ಮಂಗಳವಾರ, 28 ಸೆಪ್ಟಂಬರ್ 2021 (13:23 IST)
ಪ್ಯಾರಿಸ್ : ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಯಾವ ಸ್ಥಳಕ್ಕೇ ಹೋದರೂ ಸುದ್ದಿಯಾಗುತ್ತಾರೆ ಎನ್ನುವ ಮಾತಿಗೆ ಮತ್ತೆ ಪುಷ್ಟಿ ದೊರೆತಿದೆ. ಲ್ಯಾನ್ ಎಂಬ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿಳಿದಿದ್ದರು.
Photo Courtesy: Google

ಆಹಾರ ಮೇಳಕ್ಕೆ ಭೇಟಿ ನೀಡಿದ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದಾನೆ. ಮೆಕ್ರಾನ್ ಪುಣ್ಯಕ್ಕೆ ಆ ಮೊಟ್ಟೆ ಒಡೆದು ಚೂರಾಗದೆ ಅವರ ಮೈಮೇಲಿಂದ ಬೌನ್ಸ್ ಆಗಿ ನೆಲಕ್ಕೆ ಬಿದ್ದ ನಂತರ ಒಡೆದಿದೆ. ಸ್ವಲ್ಪದರಲ್ಲಿ ಭಾರೀ ಪ್ರಮಾದದಿಂದ ಬಚಾವಾಗಿದ್ದಾರೆ.
ಮೊಟ್ಟೆ ಎಸೆತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಘಟನೆ ನಂತರ ಮೆಕ್ರಾನ್ ತಾವು ಆರೋಪಿಯೊಂದಿಗೆ ಮಾತನಾಡಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೆಕ್ರಾನ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಅವರ ಕಪಾಳಕ್ಕೆ ಬಾರಿಸಿದ್ದ. ಅದರ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Liverpool Univesity: ಯುಕೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮಾಡಬೇಕುನ್ನುವವರಿಗೆ Good News

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರೊಪೆಸರ್‌ಗೆ ಬಿಗ್‌ ರಿಲೀಫ್‌

Operation Sindoor ಬಳಿಕ ಮತ್ತೇ ಅಣಕು ಪ್ರದರ್ಶನದಲ್ಲಿ ತೊಡಗಿದ ಭಾರತ, ಇದರ ಅರ್ಥವೇನು

Bantwal Abdul Rahim Case: ಬಿಜೆಪಿ ಶವಗಳ ಮೇಲೆ ರಾಜಕೀಯ ಮಾಡುತ್ತಿದೆ, ದಿನೇಶ್‌ ಗುಂಡೂರಾವ್‌

Abdul Rahim Case: 15 ಮಂದಿಯ ವಿರುದ್ಧ ಬಿತ್ತು ಎಫ್‌ಐಆರ್‌, ಚುರುಕುಗೊಂಡ ತನಿಖೆ

ಮುಂದಿನ ಸುದ್ದಿ
Show comments