ಹವಾಯಿ: ರಷ್ಯಾದಲ್ಲಿ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜಪಾನ್ ಫೆಸಿಫಿಕ್ ಸಾಗರ ತೀರದಲ್ಲಿ ಸುನಾಮಿ ಅಪ್ಪಳಿಸಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2011 ರ ಬಳಿಕ ಇಂತಹದ್ದೊಂದು ಪ್ರಬಲ ಭೂಕಂಪ ಸಂಭವಿಸಿರುವುದು ಇದೇ ಮೊದಲು. ರಷ್ಯಾದ ಪೆಟ್ರೋಪಾವ್ಲೋವ್ಸ್ಕ್ ನಿಂದು ಸುಮರು 136 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಆಳ ಸುಮಾರು 19 ಕಿ.ಮೀ. ಎಂದು ಅಂದಾಜಿಸಲಾಗಿದೆ. ಸಮುದ್ರದಾಳದಲ್ಲಿ ಸಂಭವಿಸಿದಭೂಕಂಪದಿಂದಾಗಿ ಅಮೆರಿಕಾ ಮತ್ತು ಜಪಾನ್ ನಲ್ಲಿ ಭಾರೀ ಗಾತ್ರದ ಅಲೆಗಳು ಎದ್ದಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಈ ಸ್ಥಳದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಕಟ್ಟಡಗಳು ಕೊಚ್ಚಿ ಹೋಗಿವೆ. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ.
ಹವಾಯಿ, ಕ್ಯಾಲಿಫೋರ್ನಿಯಾ, ಅಲಸ್ಕಾದ ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹವಾಯಿ ತೀರದಲ್ಲಿ ಈಗಾಗಲೇ 2 ಫೀಟ್ ಎತ್ತರದ ಅಲೆಗಳು ಕಂಡುಬಂದಿವೆ. ಸದ್ಯಕ್ಕೆ ಅಲೆಗಳ ಗಾತ್ರ ಅಷ್ಟೊಂದು ದೊಡ್ಡದಾಗಿಲ್ಲ. ಆದರೆ ಪೆಸಿಫಿಕ್ ಸಾಗರದ ತೀರ ಪ್ರದೇಶಗಳೆಲ್ಲಲ್ಲಾ ಸುನಾಮಿ ಭೀತಿ ಎದುರಾಗಿದೆ. ಈ ಕಾರಣಕ್ಕೆ ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿರುವ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.