Webdunia - Bharat's app for daily news and videos

Install App

911 ತುರ್ತು ನಂಬರ್ ಗೆ ಕರೆ ಮಾಡಿದ ಬಾಲಕ ಪೊಲೀಸರಿಗೆ ಹೇಳಿದ್ದೇನು ಗೊತ್ತಾ?

Webdunia
ಶುಕ್ರವಾರ, 9 ಆಗಸ್ಟ್ 2019 (09:18 IST)
ಅಮೇರಿಕಾ: ಸಾಮಾನ್ಯವಾಗಿ ಜನರು 911 ತುರ್ತು ನಂಬರ್ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾರೆ. ಆದರೆ ಅಮೇರಿಕಾದ ಪ್ಲೋರಿಡಾದಲ್ಲಿ 5 ವರ್ಷದ ಬಾಲಕನೊಬ್ಬ ತುರ್ತು ಸಂಖ್ಯೆಗೆ ಕರೆ ಮಾಡಿ ಹೇಳಿದ್ದನ್ನು ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.




ಹೌದು. ಬಾಲಕನೊಬ್ಬನಿಗೆ ತುಂಬಾ ಹಸಿವಾದ್ದರಿಂದ ಆತ 911 ತುರ್ತು ನಂಬರ್ ಗೆ ಕರೆ ಮಾಡಿ, ನನಗೆ ತುಂಬಾ ಹಸಿವಾಗಿದೆ ಪಿಜ್ಜಾ ತಂದುಕೊಡಿ ಎಂದು ಪೊಲೀಸರಿಗೆ ಆರ್ಡರ್ ಮಾಡಿದ್ದಾನೆ. ಕೆಲಸದ ಒತ್ತಡದ ನಡುವೆಯೂ ಕೋಪಗೊಳ್ಳದ ಪೊಲೀಸರು ಬಾಲಕನ ಮನಸ್ಥಿತಿಯನ್ನು ಅರಿತು ದೊಡ್ಡ ಪಿಜ್ಜಾ ಪೆಟ್ಟಿಗೆಯನ್ನು ತೆಗೆದುಕೊಂಡು ಆತನ ಮನೆಗೆ ಹೋಗಿದ್ದಾರೆ.



ಮನೆಯವರಿಗೆ  ಪೊಲೀಸರನ್ನು ಕಂಡು ಅಚ್ಚರಿಯಾಗಿದ್ದು, ಬಳಿಕ ಪೊಲೀಸರು ನಡೆದ ವಿಚಾರವನ್ನು ತಿಳಿಸಿದ್ದಾರೆ. ಬಾಲಕನ ಚೇಷ್ಠಗೆ ಮನೆಯವರು ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಪಿಜ್ಜಾ ಪೆಟ್ಟಿಗೆಯನ್ನು ಬಾಲಕನಿಗೆ ನೀಡಿದ ಪೊಲೀಸರು ಆತನ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments