Select Your Language

Notifications

webdunia
webdunia
webdunia
webdunia

ಭಯೋತ್ಪಾದಕ ಸಂಘಟನೆಗಳ ಜತೆ ಐಎಸ್‌ಐ ನಂಟು: ಅಮೆರಿಕಕ್ಕೆ ಕಳವಳ

ಭಯೋತ್ಪಾದಕ ಸಂಘಟನೆಗಳ ಜತೆ ಐಎಸ್‌ಐ ನಂಟು: ಅಮೆರಿಕಕ್ಕೆ ಕಳವಳ
ವಾಷಿಂಗ್ಟನ್ : , ಶುಕ್ರವಾರ, 26 ಫೆಬ್ರವರಿ 2016 (16:27 IST)
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಕ್ಕಾನಿ ಜಾಲ ಮುಂತಾದ ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿರುವುದಕ್ಕೆ ಅಮೆರಿಕಕ್ಕೆ ತೀವ್ರ ಕಳವಳ ಉಂಟಾಗಿದೆ ಎಂದು ಸ್ಟೇಟ್ ಕಾರ್ಯದರ್ಶಿ ಜಾನ್ ಕೆರಿ ತಿಳಿಸಿದ್ದಾರೆ. 
 
ಸಂಸತ್ತಿನ ಕಲಾಪದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯರ ಮಾತನಾಡುತ್ತಾ, ಇದಕ್ಕೆ ಸಂಬಂಧಿಸಿದಂತೆ ನಾವು ಇತ್ತೀಚೆಗೆ ಚರ್ಚೆ ನಡೆಸಿದ್ದೆವು ಎಂದು ಕೆರಿ ತಿಳಿಸಿದರು. 
 
ಅಮೆರಿಕ -ಪಾಕಿಸ್ತಾನ ನಡುವೆ ಮಹತ್ವದ ಮಾತುಕತೆ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ.  ಸಂಸತ್ತಿನ ಮಹಿಳಾ ಸದಸ್ಯೆ ತುಳಸಿ ಗಬಾರ್ಡ್ ಗುಪ್ತಚರ ಸಂಸ್ಥೆ ಹಕ್ಕಾನಿ ಜಾಲದ ಜತೆ ಹೊಂದಿದ ನಂಟನ್ನು ಕುರಿತು ಪ್ರಸ್ತಾಪಿಸಿದಾಗ ಐಎಸ್‌ಐ ಕುರಿತು ಕೆರಿ ಪ್ರತಿಕ್ರಿಯೆ ಹೊರಬಿದ್ದಿದೆ. 
 
ಅಲ್ ಖಾಯಿದಾ ಜತೆ ಸಂಪರ್ಕ ಹೊಂದಿರುವ ಹಕ್ಕಾನಿ ಜಾಲವು ಆಫ್ಘಾನಿಸ್ತಾನದ ಪಾಶ್ಚಿಮಾತ್ಯ ಮತ್ತು ಭಾರತದ ನೆಲೆಗಳ ಮೇಲೆ ಮಾರಕ ದಾಳಿಗಳನ್ನು ಮಾಡಿದ ಆರೋಪ ಹೊರಿಸಲಾಗಿದೆ. 2008ರಲ್ಲಿ ಕಾಬೂಲ್‌ನಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಕೂಡ ದಾಳಿ ಮಾಡಿದ ಆರೋಪ ಹೊತ್ತಿದೆ. 
 
ಗಬಾರ್ಡ್ ಮತ್ತು ಅವರ ಸಹೋದ್ಯೋಗಿ ಟೆಡ್ ಪೋಯ್ ಕೆರಿಗೆ ಇತ್ತೀಚೆಗೆ ಪತ್ರ ಬರೆದು ಪಾಕಿಸ್ತಾನಕ್ಕೆ ಮಿಲಿಟರಿ ಉಪಕರಣ ಮಾರಾಟದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ ಅದನ್ನು ನಿಲ್ಲಿಸುವಂತೆ ಸೂಚಿಸಿದ್ದರು.  ದೇಶವು ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಮನೋಭಾವ ನಿಲ್ಲಿಸದಿರುವಾಗ ಅದಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಕೊಡುಗೆಯನ್ನು ಪರಿಗಣಿಸಬಾರದು ಎಂದು ಗಬಾರ್ಡ್ ತಿಳಿಸಿದ್ದರು. 
 

Share this Story:

Follow Webdunia kannada