Webdunia - Bharat's app for daily news and videos

Install App

ಸಮಯ ಮೀರುವ ಮುನ್ನ ಶೀಘ್ರ ಬನ್ನಿ: ಯುಎಸ್ ಉದ್ಯಮಪತಿಗಳ ಜತೆ ಮೋದಿ

Webdunia
ಬುಧವಾರ, 1 ಅಕ್ಟೋಬರ್ 2014 (18:29 IST)
ವ್ಯಾಪಾರ ಸ್ನೇಹಿ ದೇಶವಾಗುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಡುತ್ತಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಸಮಯ ಮೀರುವ ಮುನ್ನ ಭಾರತದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುವಂತೆ ಮತ್ತು ವಿಸ್ತರಿಸುವಂತೆ ಅಮೇರಿಕಾದ ಅಗ್ರ ಸಂಸ್ಥೆಗಳನ್ನು  ಪ್ರೇರೇಪಿಸಿದ್ದಾರೆ. 

ಮಂಗಳವಾರ ಅಮೆರಿಕನ್ ಉದ್ಯಮಪತಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ ಪರಸ್ಪರ ಬೆಳವಣಿಗೆಯನ್ನು ಬೆಳೆಸುವ ನಿಟ್ಟಿನಲ್ಲಿ ವೇಗದ ಅಭಿವೃದ್ಧಿ ಮತ್ತು ಭಾರತೀಯ ಆರ್ಥಿಕತೆಯಲ್ಲಿನ ಬದಲಾವಣೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಉತ್ತೇಜಿಸಿದರು. 
 
ಅಮೇರಿಕಾ- ಭಾರತ ಬಿಸಿನೆಸ್ ಕೌನ್ಸಿಲ್ (USIBC) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮೋದಿ ಜತೆಯಾಗಿ ನಾವು ಅಭಿವೃದ್ಧಿ ಮತ್ತು ಬೆಳವಣಿಗೆಯ ಹೊಸ ಎತ್ತರಕ್ಕೆ ಏರೋಣ. ಭಾರತದಲ್ಲಿ ಉತ್ಪಾದನೆ ಮಾಡಲು ನಾವು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ ಎಂದರು. 
 
ಉದ್ಯಮ ಸಮುದಾಯ ಆದಷ್ಟು ಬೇಗ ಭಾರತಕ್ಕೆ ಬರಬೇಕು. ಯಾಕೆಂದರೆ ಬಹುಶಃ ಸರತಿ ಸಾಲು ಬಹಳ ಉದ್ದವಿದೆ. ತಡ ಮಾಡಿದವರು ಹಿಂದಕ್ಕೆ ಉಳಿದುಕೊಳ್ಳಬೇಕಾಗಬಹುದು ಎಂದು ಮೋದಿ ಹೇಳಿದರು. 
 
 2009ರ ವೈಬ್ರಂಟ್ ಗುಜರಾತ್ ವಾಣಿಜ್ಯ ಶೃಂಗ ಸಭೆಯಲ್ಲಿ ಉದ್ಯಮ ಸಮುದಾಯವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಅವರು, ಗುಜರಾತಿಗೆ ಬರಲು ವಿಳಂಬ ಮಾಡಬೇಡಿ, ಸರತಿ ಸಾಲು ಉದ್ದವಿರಬಹುದು, ಆಗ ನೀವು ಹಿಂದುಳಿಯಬೇಕಾಗುತ್ತದೆ  ಎಂದು ಆ ಸಮಯದಲ್ಲಿ ಹೇಳಿದ್ದೆ. ಈಗಲೂ ನಾನು ಆತ್ಮವಿಶ್ವಾಸದೊಂದಿಗೆ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಕ್ಯೂ ಉದ್ದವಿರಬಹುದು , ಶೀಘ್ರ ಬನ್ನಿ ಎಂದು ಮೋದಿ ಅನಿವಾಸಿ ಉದ್ಯಮಪತಿಗಳಿಗೆ ಕರೆ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments