Select Your Language

Notifications

webdunia
webdunia
webdunia
webdunia

ಆತನ ಕಿವಿಯಲ್ಲಿದ್ದವು ಮಮ್ಮಿ ಜಿರಲೆ ಮತ್ತು 24 ಮರಿ ಜಿರಲೆಗಳು!

ಆತನ ಕಿವಿಯಲ್ಲಿದ್ದವು ಮಮ್ಮಿ ಜಿರಲೆ ಮತ್ತು 24 ಮರಿ ಜಿರಲೆಗಳು!
ಚೀನಾ , ಶುಕ್ರವಾರ, 28 ಆಗಸ್ಟ್ 2015 (13:00 IST)
ಕಿವಿ, ಮೂಗಿನೊಳಗೆ ಪುಟ್ಟ ಇರುವೆ ಹೊಕ್ಕಿದರೂ ಹೌಹಾರಿ ಹೋಗುತ್ತೇವೆ. ಅದು ಹೊರ ಬರುವವರೆಗೂ ಪರದಾಡುತ್ತೇವೆ. ಆದರೆ ಕಿವಿ ನೋವೆಂದು ಆಸ್ಪತ್ರೆಗೆ ಬಂದ ಯುವಕನೋರ್ವನ ಕಿವಿ ಪರೀಕ್ಷಿಸಿದ ಚೀನಾದ ಆಸ್ಪತ್ರೆಯೊಂದರ ವೈದ್ಯರು ದಂಗು ಬಡಿದು ಹೋಗಿದ್ದಾರೆ. ಅಷ್ಟಕ್ಕೂ ಆತನ ಕಿವಿಯಲ್ಲಿ ಏನಿತ್ತು ಅಂತೀರಾ. ಮುಂದೆ ಓದಿ...

ದಕ್ಷಿಣ ಚೀನಾದಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಲೀ ಎನ್ನುವ ಯುವಕನಿಗೆ ಇತ್ತೀಚಿಗೆ ಇದ್ದಕ್ಕಿದ್ದಂತೆ ಪುಟ್ಟ ಕಿವಿ ನೋವು ಕಾಣಿಸಿಕೊಂಡಿತು. ಆದರೆ ಅದನ್ನು ಗಂಭೀರವಾಗಿ ಪರಿಣಗಣಿಸದ ಆತ ಆಸ್ಪತ್ರೆಗೆ ಹೋಗದೇ ನಿರ್ಲಕ್ಷಿಸಿದ.
 
ಆದರೆ ದಿನೇ ದಿನೇ ಕಿವಿಯಲ್ಲಿ ತುರಿಕೆ ಮತ್ತು ನೋವು ಹೆಚ್ಚಾಗುತ್ತಾ ಸಾಗಿತು. ಅದು ಸಹಿಸಲು ಅಸಾಧ್ಯವೆನಿಸಿದಾಗ ಆತ ಆಸ್ಪತ್ರೆಗೆ ಹೋದ. ತಪಾಸಣೆ ಮಾಡಿದ ವೈದ್ಯರು ಆತನ ಕಿವಿಯೊಳಗಡೆ ಇದ್ದ ಜೀವಿಯನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಲೀ ಕಿವಿಯಲ್ಲಿ ಒಂದು 25 ಮರಿ ಜಿರಳೆಗಳೊಂದಿಗೆ ಒಂದು ತಾಯಿ ಜಿರಲೆ ವಾಸ್ತವ್ಯ ಹೂಡಿತ್ತು.
 
ಅದನ್ನು ಯಶಸ್ವಿಯಾಗಿ ಹೊರತೆಗೆಯುವಲ್ಲಿ ವೈದ್ಯರು ಯಶ ಕಂಡಿದ್ದು ತಾಯಿ ಜಿರಳೆ 0.3 ರಷ್ಟು ಉದ್ದವಿತ್ತು ಎಂದು ಚೀನಾದ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ತಾಯಿ ಜಿರಲೆ 24 ರಿಂದ 75ದಿನಗಳಿಂದ ಆತನ ಕಿವಿಯನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಿರಬಹುದು ಎಂದು ವೈದ್ಯರು ಹೇಳಿದ್ದಾರೆ. 
 
ಆತನ ಕಿವಿ ಪಟಲಗಳಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಒಂದು ಪುಟ್ಟ ಸೊಳ್ಳೆ ಕಿವಿಯೊಳಕ್ಕೆ ಹೊಕ್ಕಿದರೆ ನಮಗೆ ಸಹಿಸಲಾಗುವುದಿಲ್ಲ. ಅದು ಕಿವಿಯಲ್ಲಿ ಚಲಿಸಿದಾಗ ಅಕ್ಷರಶಃ ಪರದಾಡಿ ಬಿಡುತ್ತೇವೆ. ಆದರೆ 26 ಜಿರಲೆಗಳ ಓಡಾಟ ಆತನ ಗ್ರಹಿಕೆಗೆ ಬರದಿದ್ದುದು ಅಥವಾ ಆತನದನ್ನು ಸಹಿಸಿಕೊಂಡಿದ್ದು ವಿಚಿತ್ರವೇ ಸರಿ. 

Share this Story:

Follow Webdunia kannada