Select Your Language

Notifications

webdunia
webdunia
webdunia
webdunia

ಸಲಿಂಗ ಕಾಮ ನಿವಾರಣೆಗೆ ಚೀನಾ ಆಸ್ಪತ್ರೆಗಳಲ್ಲಿ ವಿದ್ಯುತ್ ಶಾಕ್ ಚಿಕಿತ್ಸೆ

ಸಲಿಂಗ ಕಾಮ ನಿವಾರಣೆಗೆ ಚೀನಾ ಆಸ್ಪತ್ರೆಗಳಲ್ಲಿ ವಿದ್ಯುತ್ ಶಾಕ್ ಚಿಕಿತ್ಸೆ
ಬೀಜಿಂಗ್ , ಮಂಗಳವಾರ, 13 ಅಕ್ಟೋಬರ್ 2015 (16:48 IST)
ಯುಕೆಯಲ್ಲಿ ಚಾನಲ್ 4 ಪ್ರಸಾರ ಮಾಡಿದ ಸಾಕ್ಷ್ಯಚಿತ್ರವೊಂದು ಚೀನಾದಲ್ಲಿರುವ ಆಸ್ಪತ್ರೆಗಳು ಆಘಾತಕಾರಿ ವಿದ್ಯುತ್ ಶಾಕ್ ಚಿಕಿತ್ಸೆ ನೀಡುವ ಮೂಲಕ ಸಲಿಂಗ ಕಾಮಿಗಳನ್ನು ಸಾಮಾನ್ಯ ಮನುಷ್ಯರಾಗಿ ಪರಿವರ್ತಿಸುವುದನ್ನು ಬಹಿರಂಗಪಡಿಸಿದೆ. ಈ ಆಸ್ಪತ್ರೆಯಲ್ಲಿರುವ ವೈದ್ಯರು ಅಸ್ವಸ್ಥತೆಯನ್ನು ಉಂಟುಮಾಡುವ ಔಷಧಿಗಳನ್ನು ಕೂಡ ಸೂಚಿಸುತ್ತಾರೆ. 
 
ನಿನ್ನ ಪ್ರಸಕ್ತ ಸ್ಥಿತಿಯಲ್ಲಿ ನೀನು ಸಲಿಂಗಿಯನ್ನು ನೋಡಿದಾಗ ಪ್ರೀತಿಯ ಭಾವನೆ ಉಂಟಾಗುತ್ತದೆ ಎಂದು ಸಾಕ್ಷ್ಯ ಚಿತ್ರದಲ್ಲಿ ವೈದ್ಯರೊಬ್ಬರು ರೋಗಿಗೆ ಹೇಳುತ್ತಾರೆ.

ಆಸ್ಪತ್ರೆಯ ಆಚರಣೆಯನ್ನು ಬಯಲು ಮಾಡುವುದಕ್ಕಾಗಿ ರೋಗಿಯ ವೇಷಧಾರಿಯಾಗಿ ಕಾರ್ಯಕರ್ತನೊಬ್ಬ ರಹಸ್ಯ ಕಾರ್ಯಾಚರಣೆ ನಡೆಸಿದ್ದ.  ನೀನು ಹೆದರುವ ಭಾವನೆ ಉಂಟಾಗುವಂತೆ ಮಾಡುತ್ತೇನೆ ಎಂದು ವೈದ್ಯರು ರೋಗಿಗೆ ಹೇಳುತ್ತಾರೆ.   ರೋಗಿ ವಿದ್ಯುತ್ ಶಾಕ್ ಚಿಕಿತ್ಸೆಯನ್ನು ಪಡೆಯುವಾಗ ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿ ಸೆಳೆತಕ್ಕೊಳಗಾಗಿದ್ದನ್ನು ತೋರಿಸಲಾಗುತ್ತದೆ.
 
ಚಾನೆಲ್ 4ರ ಅನ್ ರಿಪೋರ್ಟಡ್ ವರ್ಲ್ಡ್ ಸರಣಿಯಲ್ಲಿ ಪ್ರಸಾರವಾದ ಈ ಸಾಕ್ಷ್ಯ ಚಿತ್ರದಲ್ಲಿ  ಸಲಿಂಗಿ ಕಾರ್ಯಕರ್ತ ಜಾನ್ ಶೇನ್ , ಪೋಷಕರು ತಮ್ಮ ಸಲಿಂಗಿ ಮಕ್ಕಳನ್ನು ಈ ಕ್ಲಿನಿಕ್‌ಗಳಿಗೆ ಕರೆತಂದು ಅಕ್ರಮವಾಗಿ ಇಂತಹ ಚಿಕಿತ್ಸೆಗಳನ್ನು ನೀಡುತ್ತಾರೆಂದು ಹೇಳಿದ್ದಾರೆ.  ಚೀನಾದ ಕೋರ್ಟ್‌ಗಳು ಔಷಧಿಗಳು ಮತ್ತು ವಿದ್ಯುತ್ ಶಾಕ್ ಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಯನ್ನು ಅಮಾನವೀಯ ಎಂಬ ಕಾರಣದಿಂದ ನಿಷೇಧಿಸಿತ್ತು. 
 

Share this Story:

Follow Webdunia kannada