Select Your Language

Notifications

webdunia
webdunia
webdunia
webdunia

ಲಖ್ವಿ ಬಿಡುಗಡೆ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಚೀನಾ ಅಡ್ಡಗಾಲು

ಲಖ್ವಿ ಬಿಡುಗಡೆ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಚೀನಾ ಅಡ್ಡಗಾಲು
ವಿಶ್ವಸಂಸ್ಥೆ , ಮಂಗಳವಾರ, 23 ಜೂನ್ 2015 (16:07 IST)
ಮುಂಬೈ ದಾಳಿಯ ರೂವಾರಿ ಮತ್ತು ಎಲ್‌ಇಟಿ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿಶ್ವಸಂಸ್ಥೆಯಲ್ಲಿ  ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ.  ವಿಶ್ವಸಂಸ್ಥೆ ವಾಗ್ದಂಡನೆ ಸಮಿತಿಯು ಭಾರತದ ಮನವಿ ಮೇರೆಗೆ ಇಲ್ಲಿ ಭೇಟಿ ಮಾಡಿದ್ದಾಗ 26/11ರ ವಿಚಾರಣೆಯಲ್ಲಿ ಪಾಕಿಸ್ತಾನ ಲಖ್ವಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಪಾಕಿಸ್ತಾನದಿಂದ ಸ್ಪಷ್ಟೀಕರಣ ಕೇಳಲಾಯಿತು. 
 
ಆದರೆ ಚೀನಾದ ಪ್ರತಿನಿಧಿಗಳು, ಭಾರತ ಸಾಕಷ್ಟು ಮಾಹಿತಿಯನ್ನು ನೀಡದಿರುವ ಆಧಾರದ ಮೇಲೆ ಈ ಕ್ರಮವನ್ನು ಬ್ಲಾಕ್ ಮಾಡಿತು. ವಿಶ್ವಸಂಸ್ಥೆ ವಾಗ್ದಂಡನೆ ಸಮಿತಿ ಹಾಲಿ ಅಧ್ಯಕ್ಷರಿಗೆ ಭಾರತದ ಕಾಯಂ ಪ್ರತಿನಿಧಿ ಅಶೋಕ್ ಮುಖರ್ಜಿ ಬರೆದಿದ್ದ ಪತ್ರದಲ್ಲಿ ಲಖ್ವಿ ಬಿಡುಗಡೆಯು ವಿಶ್ವಸಂಸ್ಥೆ ನಿರ್ಣಯದ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದರು. 
ಲಖ್ವಿ ಬಿಡುಗಡೆಯು ಅಮೆರಿಕ, ಯುಕೆ, ರಷ್ಯಾ, ಫ್ರಾನ್ಸ್, ಜರ್ಮನಿಯಲ್ಲಿ ಕಳವಳ ಮೂಡಿಸಿ ಅವನನ್ನು ಪುನಃ ಬಂಧಿಸುವಂತೆ ಕರೆ ನೀಡಿವೆ. 
 
ಲಖ್ವಿ ಮತ್ತು ಇನ್ನೂ 6 ಮಂದಿ ಅಬ್ದುಲ್ ವಾಜಿದ್, ಮಜರ್ ಇಕ್ಬಾಲ್, ಹಮದ್ ಅಮೀನ್ ಸಾದಿಕ್, ಶಾಹಿತ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಿಸ್ ಅಂಜುಮ್ 2008ರಲ್ಲಿ ಮುಂಬೈ ದಾಳಿಗೆ ಯೋಜನೆ ರೂಪಿಸಿದ್ದಾಗಿ ಆರೋಪಿಸಲಾಗಿದೆ. 
 
ಈ ಕುರಿತಂತೆ ಬಂಧಿತನಾಗಿದ್ದ ಲಖ್ವಿಯನ್ನು ಪಾಕಿಸ್ತಾನದ ಕೊರ್ಟ್ ಏಪ್ರಿಲ್ 9ರಂದು ಬಿಡುಗಡೆ ಮಾಡಿದ್ದು, ಗಡಿಯಾಚೆ ಭಯೋತ್ಪಾದನೆ ಕುರಿತು ಪಾಕಿಸ್ತಾನದ ಆಶ್ವಾಸನೆಗಳ ಮೌಲ್ಯ ನಶಿಸಿದೆ ಎಂದು ಭಾರತ ಆರೋಪಿಸಿತ್ತು. 
 

Share this Story:

Follow Webdunia kannada