DeepSeek: ಅಮೆರಿಕಾಗೆ ಚಳಿ ಜ್ವರ ತಂದಿತ್ತ ಚೀನಾದ ಡೀಪ್ ಸೀಕ್ ಎಐ, ಭಾರತಕ್ಕೂ ಸವಾಲು: ಏನಿದು ಇಲ್ಲಿದೆ ಡೀಟೈಲ್ಸ್

Krishnaveni K
ಮಂಗಳವಾರ, 28 ಜನವರಿ 2025 (16:26 IST)
Photo Credit: X
ಬೀಜಿಂಗ್: ವಿಶ್ವಕ್ಕೆ ಕೊರೋನಾದಂತಹ ಮಹಾಮಾರಿಯನ್ನು ಹರಡಿ ಆತಂಕ ತಂದಿತ್ತಿದ್ದ ಚೀನಾ ಈಗ ತನ್ನ ಬತ್ತಳಿಕೆಯಿಂದ ಮತ್ತೊಂದು ಬಾಣ ಬಿಟ್ಟಿದೆ. ಎಐ ತಂತ್ರಜ್ಞಾನ ಡೀಪ್ ಸೀಕ್ ಬಿಡುಗಡೆ ಮಾಡಿ ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೆ ಚಳಿ ಜ್ವರ ಹಿಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಈಗ ಚೀನಾದ ಡೀಪ್ ಸೀಕ್ ಭಾರೀ ಸದ್ದು ಮಾಡುತ್ತಿದೆ. ಚೀನಾ ಬಿಡುಗಡೆಗೊಳಿಸಿರುವ ಡೀಪ್ ಸೀಕ್ ಎಐ ತಂತ್ರಜ್ಞಾನ ಈಗ ಅಮೆರಿಕಾದ ತಲೆನೋವು ಹೆಚ್ಚಿಸಿದೆ. ಈ ಬಗ್ಗೆ ಈಗಾಗಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು ಇದು ನಮಗೆ ಎಚ್ಚರಿಕೆಯ ಕರೆಗಂಟೆ ಎಂದಿದ್ದಾರೆ.

ಏನಿದು ಡೀಪ್ ಸೀಕ್ ಎಐ?
ಇತ್ತೀಚೆಗೆ ಭಾರತದಲ್ಲೂ ಪಾಪ್ಯುಲರ್ ಆಗಿರುವ ಚ್ಯಾಟ್ ಜಿಪಿಟಿಯಂತಹದ್ದೇ ಎಐ ತಂತ್ರಜ್ಞಾನ ಡೀಪ್ ಸೀಕ್. ಚ್ಯಾಟ್ ಜಿಪಿಟಿಯನ್ನು ಅಮೆರಿಕಾ ವಿಶ್ವಕ್ಕೆ ಪರಿಚಯಿಸಿತ್ತು. ಇದು ಆರಂಭದಲ್ಲಿ ಉಚಿತವಾಗಿ ಗ್ರಾಹಕರಿಗೆ ಲಭ್ಯವಿತ್ತು. ಆದರೆ ಈಗ ಪಾಪ್ಯುಲರ್ ಆಗುತ್ತಿದ್ದಂತೇ ಇದಕ್ಕೆ ಚಾರ್ಜ್ ಮಾಡಲಾಗುತ್ತಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಚೀನಾ ಈಗ ತನ್ನದೇ ಡೀಪ್ ಸೀಕ್ ಎನ್ನುವ ಹೊಸ ಎಐ ತಂತ್ರಜ್ಞಾನವನ್ನು ಹೊರಬಿಟ್ಟಿದೆ. ಇದೂ ಕೂಡಾ ಚ್ಯಾಟ್ ಜಿಪಿಟಿಯಂತೇ ಕೆಲಸ ಮಾಡುತ್ತದೆ. ಅಮೆರಿಕಾದ ಚ್ಯಾಟ್ ಜಿಪಿಟಿಗೆ ಹೋಲಿಸಿದರೆ ಇದನ್ನು ಕಡಿಮೆ ಸಮಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ, ಉಚಿತವಾಗಿಯೂ ನೀಡಲಾಗುತ್ತಿದೆ.

ಹೀಗಾಗಿ ಈಗ ಡೀಪ್ ಸೀಕ್ ಹೆಚ್ಚು ಜನಪ್ರಿಯವಾಗುತ್ತಿದ್ದು ಚ್ಯಾಟ್ ಜಿಪಿಟಿಗೆ ಹೊಡೆತ ಬೀಳುತ್ತಿದೆ. ಇದರಿಂದ ಅಮೆರಿಕಾ ಷೇರುಮಾರುಕಟ್ಟೆಯೂ ತಲ್ಲಣಗೊಂಡಿದೆ. ಆದರೆ ಚೀನಾ ನಿರ್ಮಿತ ಡೀಪ್ ಸೀಕ್ ಎಷ್ಟು ಸುರಕ್ಷಿತ ಎನ್ನುವುದು ಇನ್ನೂ ಗೊತ್ತಿಲ್ಲ. ಹೀಗಾಗಿ ಭಾರತೀಯರು ಇದನ್ನು ಬಳಕೆ ಮಾಡುವುದು ಸುರಕ್ಷಿತವೇ ಎನ್ನುವುದು ಖಚಿತವಾಗಿಲ್ಲ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಡೀಪ್ ಸೀಕ್ ಭಾರೀ ಸದ್ದು ಮಾಡುತ್ತಿದ್ದು, ಭಾರತೀಯರೂ ಇಂತಹದ್ದೇ ತಂತ್ರಜ್ಞಾನವನ್ನು ಕಂಡುಹಿಡಿಯಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ಸಹಿ ಹಾಕಿದ ರಾಜ್ಯದ ಮೂವರು ಕೈ ಸಂಸದರು ಇವರೇ

ಡಿನ್ನರ್ ಮೀಟಿಂಗ್ ನಡುವೆ ಸಿಎಂ, ಡಿಸಿಎಂಗೆ ದೆಹಲಿ ಬುಲಾವ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments