Select Your Language

Notifications

webdunia
webdunia
webdunia
webdunia

ಚೆನ್ನೈ ಮೂಲದ ರಾಜಾ ರಾಜೇಶ್ವರಿ ನ್ಯೂಯಾರ್ಕ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ

ಚೆನ್ನೈ ಮೂಲದ ರಾಜಾ ರಾಜೇಶ್ವರಿ ನ್ಯೂಯಾರ್ಕ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ
ಚೆನ್ನೈ , ಮಂಗಳವಾರ, 28 ಏಪ್ರಿಲ್ 2015 (16:14 IST)
ಚೆನ್ನೈ ಮೂಲದ ರಾಜಾ ರಾಜೇಶ್ವರಿ ನ್ಯೂಯಾರ್ಕ್ ನಗರದ ಅಪರಾಧಿಕ ನ್ಯಾಯಾಲಯ ನ್ಯಾಯಮೂರ್ತಿಯಾಗಿ  ಮೇಯರ್ ಬಿಲ್ ಡೆ ಬ್ಲಾಸಿಯೋ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಹದಿಹರೆಯದಲ್ಲಿಯೇ ಅಮೆರಿಕೆಗೆ ವಲಸೆ ಬಂದ 43 ವರ್ಷ ವಯಸ್ಸಿನ ರಾಜೇಶ್ವರಿ, ಈ ಹಿಂದೆ ನಾರ್ಕೋಟಿಕ್ಸ್ ಮತ್ತು ಲೈಂಗಿಕ ಅಪರಾಧಗಳ ವಿಭಾಗದಲ್ಲಿ ಸುಪ್ರೀಂಕೋರ್ಟ್‌‌ನ ಉಪಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದರು.

ನ್ಯೂಯಾರ್ಕ್ ರಾಜ್ಯದ ನ್ಯಾಯಾಂಗ ವ್ಯವಸ್ಥೆಯ  ಅಂಗಗಳಾದ ಫ್ಯಾಮಿಲಿ ಕೋರ್ಟ್, ಅಪರಾಧಿಕ ಕೋರ್ಟ್, ಮತ್ತು ಸಿವಿಲ್ ಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗಾಗಿ ರಾಜೇಶ್ವರಿ ಸೇರಿದಂತೆ 27 ಮಂದಿ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರು.

ನ್ಯೂಯಾರ್ಕ್ ನಗದ ಮೇಯರ್, 10 ವರ್ಷಗಳ ಅವಧಿಗೆ ನ್ಯಾಯಮೂರ್ತಿಯನ್ನು ನೇಮಕ ಮಾಡಿ ಆದೇಶ ಹೊರಡಿಸುತ್ತಾರೆ.

ಭಾರತೀಯ ಮೂಲದ ರಾಜೇಶ್ವರಿ ಅತ್ಯಂತ ಪ್ರತಿಭಾವಂತೆಯಾಗಿದ್ದು, ಪ್ರಾಮಾಣಿಕತೆ, ದಕ್ಷತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅವರಿಂದ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಗೌರವ ಪಡೆಯಲಿದೆ ಎಂದು ನ್ಯೂಯಾರ್ಕ್ ಮೇಯರ್ ಬ್ಲಾಸಿಯೋ ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ರಾಜೇಶ್ವರಿ ತಮ್ಮ 16ನೇ ವಯಸ್ಸಿನಲ್ಲಿಯೇ ಭಾರತದಿಂದ ಅಮೆರಿಕೆಗೆ ವಲಸೆ ಬಂದಿದ್ದರು. ಇದೊಂದು ಕನಸಿನಂತೆ. ನನ್ನ ಮನೇಮಕ ಉಹೆಗೂ ಮೀರಿದ್ದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada