Webdunia - Bharat's app for daily news and videos

Install App

22 ಗಂಟೆಗಳಲ್ಲಿ 110 ಪುರುಷರು ನನ್ನ ಮೇಲೆ ಅತ್ಯಾಚಾರವೆಸಗಿದ್ದರು: ಬ್ರಿಟನ್ ಮಹಿಳೆ

Webdunia
ಶುಕ್ರವಾರ, 22 ಜನವರಿ 2016 (16:24 IST)
ಗ್ರೀಸ್ ದೇಶಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಮಹಾದಾಸೆ ಹೊಂದಿದ್ದ ಬ್ರಿಟನ್ ಮಹಿಳೆ ಮೆಗನ್‌ ಸ್ಟೆಫೆನ್ಸ್‌ಗೆ, ತನ್ನ ರಜೆ ಪ್ರವಾಸ ಜೀವನದಲ್ಲಿಯೇ ಘೋರ ಪ್ರಮಾದಕ್ಕೆ ಕಾರಣವಾಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. 
 
ರಜೆಗಳನ್ನು ಕಳೆಯಲು ಬ್ರಿಟನ್ ಮಹಿಳೆ ಮೆಗನ್‌ ಸ್ಟೆಫೆನ್ಸ್ ತನ್ನ ತಾಯಿಯೊಂದಿಗೆ ಗ್ರೀಸ್ ದೇಶಕ್ಕೆ ಆಗಮಿಸಿದ್ದಳು. ಮೆಗನ್ ಮತ್ತು ಆಕೆಯ ತಾಯಿಗೆ ಗ್ರೀಸ್ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು ಭೇಟಿ ಮೀಡುವ ಉದ್ದೇಶ ಹೊಂದಿದ್ದರು. 
 
ರಜೆ ಆನಂದವಾಗಿ ಕಳೆಯುತ್ತಿರುವ ಸಂದರ್ಭದಲ್ಲಿ ಮೆಗನ್‌ ಸ್ಟೆಫೆನ್ಸ್‌ಗೆ ಗ್ರೀಕ್ ಬಾರ್‌ನಲ್ಲಿ ಅಲ್ಬಾನಿಯಾ ಮೂಲದ 22 ವರ್ಷ ವಯಸ್ಸಿನ ಜಾಕ್ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ತಾನು ಜಾಕ್‌ನನ್ನು ಪ್ರೀತಿಸುತ್ತಿರುವುದಾಗಿ ಮೆಗನ್, ತನ್ನ ತಾಯಿಗೆ ಹೇಳುತ್ತಾಳೆ. ಆಕೆಯ ತಾಯಿಗೆ ಜಾಕ್ ಇಷ್ಟವಾಗುವುದಿಲ್ಲ. ಆದಾಗ್ಯೂ ಜಾಕ್‌ನೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಾಳೆ.  
 
ರಜೆ ಅಂತ್ಯಗೊಂಡ ನಂತರ ಮೆಗನ್ ತಾನು ಜಾಕ್‌ನೊಂದಿಗೆ ವಾಸಿಸುವುದಾಗಿ ತಾಯಿಯ ಮನವೊಲಿಸುತ್ತಾಳೆ.  
 
ತನ್ನ ತಾಯಿಗೆ ಥೈರಾಯಿಡ್ ಕ್ಯಾನ್ಸರ್ ಇರುವುದರಿಂದ ಚಿಕಿತ್ಸೆಗಾಗಿ ಅಗತ್ಯವಾಗುವಷ್ಟು ಹಣವಿಲ್ಲ ಎಂದು ಜಾಕ್ ತನ್ನ ಗೆಳತಿ ಮೆಗನ್‌ಗೆ ಹೇಳಿ, ಟಾಪ್‌ಲೆಸ್ ಬಾರ್‌ನಲ್ಲಿ ನೀನು ನೃತ್ಯ ಮಾಡಿದಲ್ಲಿ ಹೆಚ್ಚು ಹಣ ಗಳಿಸಬಹುದು ಎನ್ನುವ ಆಮಿಷವೊಡ್ಡುತ್ತಾನೆ.
 
ಜಾಕ್ ನಂತರ, ಮೆಗನ್‌ಳನ್ನು ಲಿಯೋನ್ ಎನ್ನುವ ಪಿಂಪ್‌‌ಗೆ ಮಾರಿಬಿಡುತ್ತಾನೆ. ಮೆಗನ್ ಅದನ್ನು ತಡೆಯಲು ಹೋದಾಗ ಜಾಕ್ ಆಕೆಯನ್ನು ಮನಬಂದಂತೆ ಥಳಿಸುತ್ತಾನೆ.
 
ಪಿಂಪ್ ಲಿಯೋನ್, ಮೆಗನ್‌ಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾನೆ. ಪ್ರತಿದಿನ 50 ಜನರೊಂದಿಗೆ ಮಲಗಬೇಕಾಗಿತ್ತು. ಒಂದು ಬಾರಿಯಂತೂ 22 ಗಂಟೆಗಳಲ್ಲಿ 110 ಜನರೊಂದಿಗೆ ಸೆಕ್ಸ್ ಮಾಡುವಂತೆ ಒತ್ತಡ ಹೇರಲಾಗಿತ್ತು ಎಂದು ಮೆಗನ್ ತಿಳಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ