Select Your Language

Notifications

webdunia
webdunia
webdunia
webdunia

ಬ್ರಾ ನಗರದಲ್ಲಿ ಮಹಿಳೆಯರ 'ಬ್ರಾ' ಕದಿಯುತ್ತಿದ್ದ ಕಳ್ಳನ ಬಂಧನ

ಬ್ರಾ ನಗರದಲ್ಲಿ ಮಹಿಳೆಯರ 'ಬ್ರಾ' ಕದಿಯುತ್ತಿದ್ದ ಕಳ್ಳನ ಬಂಧನ
ಬ್ರಾ (ಇಟಲಿ) , ಶುಕ್ರವಾರ, 20 ಜೂನ್ 2014 (13:32 IST)
ಮನೆಯ ತುಂಬಾ ವಿವಿಧ ರೀತಿಯ ವಿವಿಧ ಆಕಾರದ ಮಹಿಳೆಯರು ಧರಿಸುವ ಬ್ರಾ ವಸ್ತ್ರಗಳನ್ನು ಹೊಂದಿದ್ದ  28 ವರ್ಷ ವ್ಯಕ್ತಿಯನ್ನು ಬ್ರಾ ಪಟ್ಟಣದಲ್ಲಿ ಬಂಧಿಸಿರುವುದು ವಿಚಿತ್ರವಾಗಿದೆ. 
 
ಮಹಿಳೆಯರ 'ಬ್ರಾ' ಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.  
 
ವಿಚಿತ್ರವೆಂದರೆ,ಈ ಕಳ್ಳ ಕೇವಲ ಮಹಿಳೆಯರ 'ಬ್ರಾ' ಮಾತ್ರ ಕದಿಯುತ್ತಿರಲಿಲ್ಲ. ಪ್ಯಾಂಟಿ ಕೂಡಾ ಕದ್ದು ತನ್ನ ಮನೆಯ ತುಂಬಾ ಜೋಡಿಸಿಟ್ಟಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
 
28 ವರ್ಷ ವಯಸ್ಸಿನ ಆರೋಪಿ ಪೊಕೊಪಗ್ಲಿಯಾ ಪಟ್ಟಣದವನಾಗಿದ್ದು, ಬ್ರಾ ಮತ್ತು ಪ್ಯಾಂಟಿಗಳ ಸರಣಿ ಕಳ್ಳತನವೆಸಗಿ ಸಾವಿರಾರು ಬ್ರಾ ಮತ್ತು ಪ್ಯಾಂಟಿಗಳನ್ನು ಮನೆಯಲ್ಲಿ ಅಂದವಾಗಿ ತೂಗುಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರೋಪಿಯನ್ನು ಪ್ರಸ್ತುತ ಗೃಹ ಬಂಧನದಲ್ಲಿರಿಸಲಾಗಿದ್ದು, ಮಾಜಿ ಪ್ರಿಯತಮೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾರೆ.
 
ಆಸಕ್ತಿಕರ ವಿಷಯವೆಂದರೆ, ಬ್ರಾ ನಗರ 'ಬ್ರಾ' ಕಳ್ಳನ ಕೈ ಚಳಕದಿಂದ ದಂಗಾಗಿ ಹೋಗಿತ್ತು. ಮಹಿಳೆಯರು ಕಳ್ಳನ ವರ್ತನೆಯಿಂದ ರೋಸಿ ಹೋಗಿದ್ದರು.  
 
ಕಳೆದ ವರ್ಷ ಕೂಡಾ 200 ಯುರೋ ಮೌಲ್ಯದ 'ಬ್ರಾ' ಕದ್ದ 74 ವರ್ಷ ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದು.

Share this Story:

Follow Webdunia kannada