Select Your Language

Notifications

webdunia
webdunia
webdunia
webdunia

ಸೆಕ್ಸ್ ಎಜುಕೇಶನ್ ಕ್ಲಾಸ್ ಕೇಳಿ ಸಹ ವಿದ್ಯಾರ್ಥಿನಿಯನ್ನೇ ರೇಪ್ ಮಾಡಿದ ಬಾಲಕ

ಸೆಕ್ಸ್ ಎಜುಕೇಶನ್ ಕ್ಲಾಸ್ ಕೇಳಿ ಸಹ ವಿದ್ಯಾರ್ಥಿನಿಯನ್ನೇ ರೇಪ್ ಮಾಡಿದ ಬಾಲಕ
ನಾರ್ತ್ ವೇಲ್ಸ್‌ , ಶನಿವಾರ, 29 ನವೆಂಬರ್ 2014 (09:35 IST)
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಪರಿಚಯಿಸುವ ಬಗ್ಗೆ  ಭಾರತದಲ್ಲಿ  ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅನೇಕ ದೇಶಗಳಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಸೆಕ್ಸ್ ಎದುಕೇಶನ್ ನೀಡುವುದು ಸಾಮಾನ್ಯ. ಆದರೆ ವಿದೇಶಗಳಲ್ಲೂ ಈಗ ಮಕ್ಕಳಿಗೆ ಈ ಶಿಕ್ಷಣ ನೀಡುವುದು ಬೇಡ ಎಂಬ ವಾದಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಈ ಘಟನೆ.

ಸೆಕ್ಸ್ ಎಜುಕೇಶನ್ ಪಾಠದ ತರಗತಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿ ಮೇಲೇ ಅತ್ಯಾಚಾರ ಎಸಗಿರುವ ಆಘಾತಕಾರಿ ಸುದ್ದಿ ಬ್ರಿಟನ್‌ನಲ್ಲಿ ನಡೆದಿದೆ.
 
ನಾರ್ತ್ ವೇಲ್ಸ್‌ನ ಗೈನೆದ್ ಮೂಲದ 13 ವರ್ಷದ ಬಾಲಕ ತನ್ನ ಸ್ನೇಹಿತೆಯ ಮೇಲೆ ರೇಪ್ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಘಟನೆ ಕುರಿತಂತೆ ತೀವ್ರ ತನಿಖೆ ನಡೆಯುತ್ತಿದೆ.
 
ಘಟನೆ ಕುರಿತಂತೆ ತೀವ್ರ ತನಿಖೆ ನಡೆಯುತ್ತಿದೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸೆಕ್ಸ್ ಎಜುಕೇಶನ್ ಬಗ್ಗೆ ಟೀಕೆಗಳು ಪ್ರಾರಂಭವಾಗಲು ಈ ಘಟನೆ ಮುನ್ನುಡಿ ಹಾಡಿದೆ.

Share this Story:

Follow Webdunia kannada