Select Your Language

Notifications

webdunia
webdunia
webdunia
webdunia

ಲಾಹೋರ್‌ನಲ್ಲಿ ಬಾಂಬ್ ಸ್ಫೋಟ: ಐವರ ದುರ್ಮರಣ

ಲಾಹೋರ್‌ನಲ್ಲಿ ಬಾಂಬ್ ಸ್ಫೋಟ: ಐವರ ದುರ್ಮರಣ
ಪಾಕಿಸ್ತಾನ , ಮಂಗಳವಾರ, 17 ಫೆಬ್ರವರಿ 2015 (14:09 IST)
ದುಷ್ಕರ್ಮಿಗಳು ಪೊಲೀಸರನ್ನು ಗುರಿಯಾಗಿಸಿಕೊಂಡು ಇಲ್ಲಿನ ಪೊಲೀಸ್ ಲೇನ್‌ನಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಲಾಹೋರ್‌ ನಗರದಲ್ಲಿ ನಡೆದಿದೆ. 
 
ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಅಲ್ಲದೆ ಈ ಐವರ ಸಾವು ಬಿಟ್ಟರೆ ಬೇರೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದು, ಪೊಲೀಸರನ್ನು ಗುರಿಯಾಗಿಸಿಕೊಂಡು ಉಗ್ರರೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಂಕಿಸಿದ್ದಾರೆ. 
 
ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ್ದ ನಗರದ ಉನ್ನತ ಪೊಲೀಸ್ ಅಧಿಕಾರಿಗಳು, ಸ್ಥಳವನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 
 

Share this Story:

Follow Webdunia kannada