Select Your Language

Notifications

webdunia
webdunia
webdunia
webdunia

ಲಿಬಿಯಾದಲ್ಲಿ ವಲಸೆಗಾರರಿದ್ದ ದೋಣಿ ಮುಳುಗಿ 200 ಜನ ಸತ್ತಿರುವ ಶಂಕೆ

ಲಿಬಿಯಾದಲ್ಲಿ ವಲಸೆಗಾರರಿದ್ದ ದೋಣಿ ಮುಳುಗಿ 200 ಜನ ಸತ್ತಿರುವ ಶಂಕೆ
ಟ್ರಿಪೋಲಿ, ಲಿಬಿಯಾ , ಶುಕ್ರವಾರ, 28 ಆಗಸ್ಟ್ 2015 (17:12 IST)
ಇಟಲಿಗೆ ತೆರಳುತ್ತಿದ್ದ ಆಫ್ರಿಕಾದ ವಲಸೆಗಾರರು ತುಂಬಿದ್ದ ದೋಣಿಯೊಂದು ಲಿಬಿಯಾದ ಸಮುದ್ರತೀರದಲ್ಲಿ ಗುರುವಾರ ಮುಳುಗಿದ್ದರಿಂದ ಸುಮಾರು 200 ಜನರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.  

ಜುವಾರಾದ ಪಶ್ಚಿಮ ಪಟ್ಟಣದ ಭದ್ರತಾ ಅಧಿಕಾರಿ ದೋಣಿಯಲ್ಲಿ ಸುಮಾರು 400 ಜನರಿದ್ದರು. ಅದು ಮುಳುಗಿದಾಗ ಅನೇಕ ಮಂದಿ ಸಿಕ್ಕಿಬಿದ್ದು ಮೃತಪಟ್ಟರು ಎಂದು ಹೇಳಿದ್ದಾರೆ. ಲಿಬ್ಯಾದ ಕರಾವಳಿ ಪಡೆ ಸುಮಾರು 201ಜನರನ್ನು ರಕ್ಷಿಸಿದ್ದು, 147 ಮಂದಿಯನ್ನು ಪಶ್ಚಿಮ ತ್ರಿಪೋಲಿಯ ಸಬ್ರತಾ ಬಳಿಯಲ್ಲಿ ಅಕ್ರಮ ವಲಸೆಗಾರರ ಬಂಧನ ಕೇಂದ್ರಕ್ಕೆ ಸಾಗಿಸಲಾಗಿದೆ.

ದೋಣಿಯಲ್ಲಿದ್ದ ವಲಸೆಗಾರರು ಉಪಸಹರಾ ಆಫ್ರಿಕಾ, ಪಾಕಿಸ್ತಾನ, ಸಿರಿಯಾ, ಮೊರಕ್ಕೊ ಮತ್ತು ಬಾಂಗ್ಲಾದೇಶಕ್ಕೆ ಸೇರಿದವರು ಎಂದು ಭದ್ರತಾ ಅಧಿಕಾರಿ ಹೇಳಿದ್ದಾರೆ. 
 

Share this Story:

Follow Webdunia kannada