Select Your Language

Notifications

webdunia
webdunia
webdunia
webdunia

ಶ್ರೀಮಂತ ಭಿಕ್ಷುಕ: ಕ್ರೆಡಿಟ್ ಕಾರ್ಡ್ ಮೂಲಕ ಭಿಕ್ಷೆ, ದೇಶವಿದೇಶ ಸುತ್ತಾಟ

ಶ್ರೀಮಂತ ಭಿಕ್ಷುಕ: ಕ್ರೆಡಿಟ್ ಕಾರ್ಡ್ ಮೂಲಕ  ಭಿಕ್ಷೆ, ದೇಶವಿದೇಶ ಸುತ್ತಾಟ
ಲಂಡನ್ , ಗುರುವಾರ, 22 ಜನವರಿ 2015 (10:21 IST)
ಬ್ರಿಟನ್‌ನಲ್ಲೊಬ್ಬ ಶ್ರೀಮಂತ ಭಿಕ್ಷುಕನಿದ್ದಾನೆ. ಆತ ಭಿಕ್ಷೆ ಸ್ವೀಕರಿಸುವುದು ಹೇಗೆ ಗೊತ್ತೆ. ಕ್ರೆಡಿಟ್ ಕಾರ್ಡ್ ಮೂಲಕ!
ಡೇಮಿಯನ್ ಪ್ರೆಸ್ಟನ್ ಬೂತ್ ಎಂಬ ಹೆಸರಿನ 37ವರ್ಷದ ಈ ವೃತ್ತಿಪರ ಭಿಕ್ಷುಕ ಲಂಡನ್‌ನ ಪ್ರತಿಷ್ಠಿತ ಪ್ರದೇಶ ಮೇಫೇರ್‌ನಲ್ಲಿ ಪ್ರತಿದಿನ ಭಿಕ್ಷಾಟನೆಗೆ ಕುಳಿತುಕೊಳ್ಳುತ್ತಾನೆ. ಈತನ ಜತೆ ಪೋರ್ಟೇಬಲ್ ಕಾರ್ಡ್‌ರೀಡರ್ ಸದಾ ಇರುತ್ತದೆ. ನಾನು ನಿರ್ಗತಿಕ ಸಹಾಯ ಮಾಡಿ ಎಂದು ಅಂಗಲಾಚುವ ಈತ ಶ್ರೀಮಂತರ ಪ್ರವಾಸಿಗಳಿಂದ ಹತ್ತಾರು ಪೌಂಡ್ ಭಿಕ್ಷೆ ಪಡೆಯಲು ಯಶಸ್ವಿಯಾಗುತ್ತಾನೆ. 
 
ಲಂಕಾಷೈರ್‌ನಲ್ಲಿ ಐಷಾರಾಮಿ ಫ್ಲ್ಯಾಟ್ ಬಾಡಿಗೆ ಪಡೆದಿರುವ ಈತ ಪ್ರತಿದಿನ ನೂರಾರು ಕೀಲೋಮೀಟರ್ ಪ್ರಯಾಣಿಸಿ ಲಂಡನ್‌ನ ಬೀದಿಗಳಲ್ಲಿ ತನ್ನ ಕಾಯಕವನ್ನು ನಡೆಸುತ್ತಾನೆ. 
 
ಈ ರೀತಿ ಭಿಕ್ಷಾಟನೆಯಿಂದಲೇ ಶ್ರೀಮಂತನಾಗಿರುವ ಆತ ಪ್ರತಿವರ್ಷ 5, 6 ಬಾರಿ ವಿದೇಶಗಳಿಗೆ ಪ್ರವಾಸ ಮಾಡುತ್ತಾನೆ ಎನ್ನುತ್ತಾನೆ ಆತನ ಮಾಜಿ ಸ್ನೇಹಿತ.

Share this Story:

Follow Webdunia kannada