Webdunia - Bharat's app for daily news and videos

Install App

ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ಮುಂಬೈ ದಾಳಿಯ ಮಾಸ್ಟರ ಮೈಂಡ್ ಉಗ್ರ ಅಜೀಜ್ ಸಾವು

Sampriya
ಬುಧವಾರ, 23 ಜುಲೈ 2025 (14:54 IST)
Photo Credit X
ಪಾಕಿಸ್ತಾನ: 2001 ರ ಭಾರತೀಯ ಸಂಸತ್ ಮೇಲಿನ ದಾಳಿ ಮತ್ತು 26/11 ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್‌ ಲಷ್ಕರ್-ಎ-ತೊಯ್ಬಾದ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 

ಮೂಲಗಳ ಪ್ರಕಾರ, ಮೇ 6 ರಂದು ಭಾರತದ ಆಪರೇಷನ್ ಸಿಂದೂರ್ ಸಮಯದಲ್ಲಿ ಆರ ಗಾಯಗೊಂಡಿದ್ದ. 

ಅಬ್ದುಲ್ ಅಜೀಜ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಉನ್ನತಾಧಿಕಾರ ಮತ್ತು ಕಾರ್ಯತಂತ್ರದ ಮಾಡ್ಯೂಲ್ ಸಂಯೋಜಕನಾಗಿದ್ದ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತದ ನಿಖರ ಕ್ಷಿಪಣಿ ದಾಳಿಯಲ್ಲಿ
ಗಾಯಗೊಂಡ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. 

ಆತನ ಅಂತ್ಯಕ್ರಿಯೆಯ ದೃಶ್ಯಗಳು, ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ, ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಅವರಂತಹ ಹಿರಿಯ ಲಷ್ಕರ್ ನಾಯಕರು ಅವನ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. 

ಅಜೀಜ್ ಲಷ್ಕರ್‌ನ ಅತ್ಯಂತ ವಿಶ್ವಾಸಾರ್ಹ ಕಾರ್ಯಕರ್ತರಲ್ಲಿ ಒಬ್ಬನಾಗಿದ್ದ ಮತ್ತು ಪ್ರಮುಖ ಹಣಕಾಸಿನ ಲಿಂಕ್ ಆಗಿದ್ದ. ಅವರು ಗಲ್ಫ್ ರಾಷ್ಟ್ರಗಳು, ಯುಕೆ ಮತ್ತು ಯುಎಸ್ ಮೂಲದ ಮೂಲಭೂತ ಇಸ್ಲಾಮಿಸ್ಟ್ ಗುಂಪುಗಳು ಮತ್ತು ಪಾಕಿಸ್ತಾನಿ ಸಮುದಾಯಗಳಿಂದ ಹಣವನ್ನು ಸಂಗ್ರಹಿಸಿದ್ದ ಎಂದು ವರದಿಯಾಗಿದೆ. 

ಹಣಕಾಸಿನ ಆಚೆಗೆ, ಅಜೀಜ್ ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ ಪೂರೈಕೆ ಮತ್ತು ನೇಮಕಾತಿಗಳನ್ನು ನಿರ್ವಹಿಸುತ್ತಿದ್ದ. ಅವರ ಮರಣವು ಲಷ್ಕರ್-ಎ-ತೊಯ್ಬಾಗೆ ಗಮನಾರ್ಹ ಹಿನ್ನಡೆಯಾಗಿದೆ, ಅದರ ಕಾರ್ಯಾಚರಣೆಗಳ ನಿರ್ಣಾಯಕ ಸ್ತಂಭವನ್ನು ಛಿದ್ರಗೊಳಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ದೇವಿ ಪ್ರಸಾದ್ ಶೆಟ್ಟಿಯವರ ಪ್ರಕಾರ ಸಡನ್ ತೂಕ ಇಳಿಕೆ ಮಾಡಿದರೆ ಏನಾಗುತ್ತದೆ

Karnataka Rains: ಇಂದೂ ಈ ಜಿಲ್ಲೆಯವರಿಗೆ ಭಾರೀ ಮಳೆಯ ಎಚ್ಚರಿಕೆ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಮುಂದಿನ ಸುದ್ದಿ
Show comments