Webdunia - Bharat's app for daily news and videos

Install App

ಬೆಚ್ಚಿ ಬಿದ್ದ ಆಸ್ಟೇಲಿಯಾ: ಇಂತಹ ಕೆಟ್ಟ ಅಪ್ಪನ ಬಗ್ಗೆ ನೀವೆಂದೂ ಕೇಳಿರಲಾರಿರಿ

Webdunia
ಶುಕ್ರವಾರ, 24 ಜೂನ್ 2016 (16:05 IST)
ಅಪ್ಪ ನೀಡುವ ಭದ್ರತೆಯ ಭಾವನೆಯನ್ನು ಮತ್ಯಾರೂ ನೀಡಲಾರರು. ಆದರೆ ಅಪ್ಪ ಅನ್ನೋ ಸಂಬಂಧಕ್ಕೆ ಅಪವಾದ ಎನ್ನುವಂತಹ ಪಾಪಿ ತಂದೆಯಂದಿರು ಇರುತ್ತಾರೆ. ಅಂತವರಲ್ಲೊಬ್ಬ ಈತ. ತನ್ನ ಸ್ವಂತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮೇಲೆ ದೌರ್ಜನ್ಯವೆಸಗಲು ಅಪರಿಚಿತರಿಗೂ ಅವಕಾಶ ನೀಡಿದ ರಾಕ್ಷಸಿ ಮನಸ್ಥಿತಿಯ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾದ ನ್ಯಾಯಾಲಯ 22 ವರ್ಷ 6 ತಿಂಗಳ ಅವಧಿಯ ಕಠಿಣ ಜೈಲು ಶಿಕ್ಷೆ ನೀಡಿದೆ. 
 
ಕೇವಲ ಮೋಜಿಗಾಗಿ ನಾನಿದನ್ನು ಮಾಡುತ್ತಿದ್ದೆ ಎಂದಾತ ಹೇಳಿದ್ದು ನ್ಯಾಯಾಧೀಶರನ್ನು ಶಾಕ್ ಆಗುವಂತೆ ಮಾಡಿದೆ. ತಾನಷ್ಟೇ ಈ ಕೀಚಕ ಕೃತ್ಯವನ್ನು ಮಾಡುತ್ತಿರಲಿಲ್ಲ ಆತ. ಅಂತರ್ಜಾಲದ ಮುಖಾಂತರ 6 ಮಂದಿಯನ್ನು ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲು ಆಹ್ವಾನಿಸಿದ್ದ. ಅವರು ಪುಟ್ಟ ಮಗುವಿನ ಮೇಲೆ ಅತ್ಯಾಚಾರವೆಸಗುವಾಗ ನಿಂತುಕೊಂಡು ನೋಡುತ್ತಿದ್ದ ಅಥವಾ ಅವರ ಜತೆ ತಾನು ಕೂಡ ಕೃತ್ಯದಲ್ಲಿ ಪಾಲ್ಗೊಳ್ಳುತ್ತಿದ್ದ ಎಂಬ ಘೋರ ಸತ್ಯ ಸಹ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ. 
 
2013ರಿಂದ 2015ರ ಅವಧಿಯಲ್ಲಿ  ತಾನು 61 ಬಾರಿ  ಅತ್ಯಾಚಾರವೆಸಗಿದ್ದೇನೆ ಎಂದಾತ ಒಪ್ಪಿಕೊಂಡಿದ್ದು ಆಗ ಆಕೆಯ ವಯಸ್ಸು ಕೇವಲ 11 ರಿಂದ 13.
 
ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿರುವ ದೃಶ್ಯಾವಳಿಗಳು ಸಹ ಪೊಲೀಸರ ಬಳಿ ಇದ್ದು, ಅಪ್ಪ, ಪ್ಲೀಸ್ ನಿಲ್ಲಿಸು ಎಂದಾಕೆ ದಯನೀಯವಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ಯಾರನ್ನಾದರೂ ಅಳಿಸದಿರದು.
 
ನಾನು ಇದೆಲ್ಲದರಿಂದ ಹೊರ ಬರಲು ಬಯಸಿದ್ದೇನೆ. ನಾನು ಇನ್ನು ಮುಂದೆ ಪ್ರಾಮಾಣಿಕನಾಗಿರುತ್ತೇನೆ. ಕೇವಲ ಮೋಜಿಗಾಗಿ ನಾನಿದನ್ನು ಮಾಡಿದ್ದೆ. ಆದರೆ ಎಲ್ಲೆ ಮೀರಿ ಹೋಯಿತು ಎಂದು 42 ವರ್ಷದ ಪಾಪಿ ತಂದೆ ಈಗ ಪಶ್ಚಾತಾಪ ವ್ಯಕ್ತ ಪಡಿಸಿದ್ದಾನೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments