Select Your Language

Notifications

webdunia
webdunia
webdunia
webdunia

ಹೇ ಡುಮ್ಮಾ, ಸ್ವಲ್ಪ ಬೊಜ್ಜು ಇಳಿಸಿಕೋ : ಚೀನಿ ರಾಷ್ಟ್ರಪತಿಗೆ 9 ರ ಬಾಲಕನ ಪತ್ರ

ಹೇ ಡುಮ್ಮಾ, ಸ್ವಲ್ಪ ಬೊಜ್ಜು ಇಳಿಸಿಕೋ : ಚೀನಿ ರಾಷ್ಟ್ರಪತಿಗೆ 9 ರ ಬಾಲಕನ ಪತ್ರ
ಬೀಜಿಂಗ್ , ಶುಕ್ರವಾರ, 19 ಡಿಸೆಂಬರ್ 2014 (13:21 IST)
ಮಕ್ಕಳ ಮನಸ್ಸು ನಿರ್ಮಲ ನೀರಿನ ತರಹ...  ಮುಗ್ಧ ಮನಸ್ಸುಗಳಲ್ಲಿ ಕಪಟಕ್ಕೆ ಜಾಗವಿರುವುದಿಲ್ಲ....ಅವರು ತಮಗೆ ಅನ್ನಿಸಿದ್ದನ್ನು ಮುಚ್ಚು ಮರೆಯಿಲ್ಲದೇ ನೇರವಾಗಿ ಹೇಳಿ ಬಿಡುತ್ತಾರೆ.....
ಚೀನಾದ ರಾಷ್ಟ್ರಪತಿ ಕ್ಸಿ ಜಿನ್‌ಪಿಂಗ್ ಅವರಿಗೆ 9 ವರ್ಷದ ಬಾಲಕನೊಬ್ಬ ಪತ್ರ ಬರೆದಿದ್ದಾನೆ. ಇದು ದೇಶಾದ್ಯಂತ ಸಂಚಲನವನ್ನು ಮೂಡಿಸಿತು. ಆದರೆ ರಾಷ್ಪ್ರಪತಿಯವರ ಮಾಧ್ಯಮ ಸಲಹಾ ಮಂಡಳಿ ಇದನ್ನು ಸೆನ್ಸಾರ್ ಮಾಡಿದೆ. ಪತ್ರದಲ್ಲಿ ಬಾಲಕ ನಿಮ್ಮ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾನೆ.
 
 ನಿಯು ಜಿರು ಎಂಬ 4 ನೇ ತರಗತಿಯ ಈ ಪುಟ್ಟ ಹುಡುಗ ಜೆಂಗ್ಜಾವ್ ವೆಸ್ಟ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ.  ಶಾಲೆಯಲ್ಲಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಈತ ತನ್ನ ದೇಶದ ರಾಷ್ಟ್ರಪತಿಯನ್ನುದ್ದೇಶಿಸಿ ಪತ್ರ ಬರೆದಿದ್ದ.
 
ಪತ್ರದಲ್ಲಿ ರಾಷ್ಟ್ರಪತಿಯನ್ನಾತ 'ಶೀ ದಾದಾ' ಎಂದು ಸಂಭೋಧಿಸಿದ್ದಾನೆ. ಪತ್ರವನ್ನು ಪೋಸ್ಟ್ ಮಾಡಲಾಗಿಲ್ಲ. ಆದರೆ ತನ್ನ ಮಗ ಬರೆದ ಪತ್ರವನ್ನು ಮೆಚ್ಚಿದ ಆತನ ತಂದೆ ಅದನ್ನು ವಿ- ಚೆಟ್‌ನಲ್ಲಿ ಪೋಸ್ಟ್ ಮಾಡಿದ. ಈ ಪತ್ರ ಓದಿದ ರಾಷ್ಟ್ರಪತಿಯವರಿಗೆ ಏನೆನಿಸಿತೋ ಗೊತ್ತಿಲ್ಲ. ಆದರೆ ಅವರ ಮಾಧ್ಯಮ ಸಲಹಾ ಮಂಡಳಿಗೆ ಇದು ಸರಿ ಕಾಣಲಿಲ್ಲ.  ಅವರಿದನ್ನು ಡಿಜಿಟಲ್ ಅವೃತ್ತಿಯಿಂದ ತೆಗೆದು ಹಾಕಿದ್ದಾರೆ.
 
ಬಾಲಕ ಬರೆದ ಪತ್ರದಲ್ಲಿ ಹೀಗಿದೆ:  "ಚೀನಾಕ್ಕೆ ಮಂಗಳ ಗೃಹಕ್ಕೆ ಹೋಗುವ ಯೋಜನೆಯನ್ನು ಮಾಡಬೇಕಿದೆ. ಭಾರತ, ರಶಿಯಾ, ಅಮೇರಿಕಾ ಮತ್ತು ಯುರೋಪ್ ದೇಶಗಳು ಸಹ ಈ ದಿಶೆಯಲ್ಲಿ ಕಾರ್ಯತತ್ಪರವಾಗಿವೆ. ನಮಗೂ ಸಹ ಆದಷ್ಟು ಬೇಗ ಈ ಕುರಿತು ಯೋಜಿಸಬೇಕಿದೆ". 
 
ನಂತರ ವಿಷಯ ಬದಲಾಯಿಸಿರುವ ಬಾಲಕ... "ಶ್ರೀ ದಾದಾ... ನೀವು ಕನಿಷ್ಠ ಪಕ್ಷ  ಪುಟಿನ್ ತರಹ ಆಗಿ... ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಅವಶ್ಯಕತೆ ಇದೆ.  ಅಮೇರಿಕಾ ರಾಷ್ಟ್ರಪತಿ ಬರಾಕ್ ಒಬಾಮಾರವರಷ್ಟು ಸ್ಲಿಮ್ ಅಲ್ಲಿದ್ದರೂ.. ಕನಿಷ್ಠ ಪಕ್ಷ ರಶಿಯಾದ ರಾಷ್ಟ್ರಪತಿ ಪುಟಿನ್ ಅವರಂತಾದರೂ ಆಗಿ" ಎಂದು ಸಲಹೆ ನೀಡಿದ್ದಾನೆ.

Share this Story:

Follow Webdunia kannada