Webdunia - Bharat's app for daily news and videos

Install App

ಅಮೆರಿಕದ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಮೋದಿಯ ಭಾಷಣ ಮೋಡಿಗೆ ಹರ್ಷೋದ್ಗಾರ

Webdunia
ಸೋಮವಾರ, 29 ಸೆಪ್ಟಂಬರ್ 2014 (12:48 IST)
ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ತಮ್ಮ ಭಾಷಣದ ಮೂಲಕ ನೆರೆದಿದ್ದ ಭಾರತೀಯ ಅಮೆರಿಕ ಸಮುದಾಯದ ಜನರನ್ನು ಮಂತ್ರಮುಗ್ಧಗೊಳಿಸಿದರು. ಅವರ ಭಾಷಣದುದ್ದಕ್ಕೂ ಜನರು ಹರ್ಷೋದ್ಗಾರ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೋದಿ ಭಾಷಣವನ್ನು ಟೈಮ್ಸ್ ಚೌಕದಲ್ಲಿ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಅವರ ಭಾಷಣದ ಕೆಳಗೆ ಇಂಗ್ಲಿಷ್ ಅನುವಾದವನ್ನು ನೀಡಲಾಯಿತು. 
 
ಸತತವಾಗಿ ಮೋದಿಯ ಮಂತ್ರ ಉಚ್ಚರಿಸಿದ ಜನರಿಗೆ ಇಂತಹ ಪ್ರೀತಿಯನ್ನು ಯಾವುದೇ ಭಾರತೀಯ ಮುಖಂಡನಿಗೆ ನೀಡಿಲ್ಲ. ನಿಮ್ಮ ಕನಸಿನ ಭಾರತ ನಿರ್ಮಿಸುವ ಮೂಲಕ ನಿಮ್ಮ ಸಾಲ ತೀರಿಸುತ್ತೇನೆ ಎಂದು ಮೋದಿ ಭಾವುಕರಾಗಿ ಹೇಳಿದರು.
 
 ಮೋದಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಆರಂಭ ಮತ್ತು ಅಂತ್ಯಗೊಳಿಸಿದರು. ಸುಮಾರು 20,000 ಭಾರತೀಯ ಅಮೆರಿಕನ್ನರು ಅವರ ಪ್ರತಿ ಮಾತಿಗೂ ಜಯಕಾರಿ ಹಾಕಿ ಮೋದಿ, ಮೋದಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
 
ಮೋದಿ ಭಾಷಣ ಕೊನೆಯಾಗುತ್ತಿದ್ದಂತೆ ಗಂಗಾ ನದಿಯ ಪ್ರಾಮುಖ್ಯತೆ ಬಿಂಬಿಸುವ ಮತ್ತು ಸಾವಿರಾರು ಜನರು ಹೇಗೆ ಪೂಜಿಸುತ್ತಾರೆಂದು ಸಣ್ಣ ವಿಡಿಯೋ ವೀಕ್ಷಿಸುವಂತೆ ಮನವಿ ಮಾಡಿದರು.
 
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು 
 1. ಎಲ್ಲರಿಗೂ ನವರಾತ್ರಿ ಶುಭ ಹಾರೈಸುತ್ತೇನೆ.
2. ನವರಾತ್ರಿಯ ಪವಿತ್ರ ಉತ್ಸವದಂದು ಸಾವಿರಾರು ಮೈಲುಗಳ ದೂರದಲ್ಲಿರುವ ಭಾರತೀಯರನ್ನು ಭೇಟಿ ಮಾಡುವ ಭಾಗ್ಯ ಸಿಕ್ಕಿದೆ.
3. ನವರಾತ್ರಿ ಶಕ್ತಿ ಮತ್ತು ಶುದ್ದೀಕರಣದ ಪೂಜೆಯ ಉತ್ಸವ. ಈ ಸಂದರ್ಭದಲ್ಲಿ ನಿಮ್ಮ ಭೇಟಿ ಅದೃಷ್ಟಶಾಲಿಯಾಗಿದೆ.
 
4. ಒಂದು ಕಾಲದಲ್ಲಿ ಭಾರತ ಹಾವಾಡಿಗರ ನೆಲವೆಂದು ಹೆಸರಾಗಿತ್ತು. ನೀವು ಅಲ್ಲಿ ಇಲ್ಲದಿದ್ದರೆ, ಆ ಪರಿಕಲ್ಪನೆ ಹಾಗೇ ಉಳಿಯುತ್ತಿತ್ತು. ಆ ದೃಷ್ಟಿಕೋನ ಬದಲಾಯಿಸಿದ ಜನರಿಗೆ, ಮಾಹಿತಿ ತಂತ್ರಜ್ಞಾನಕ್ಕೆ ಧನ್ಯವಾದಗಳು.
5. ನಮ್ಮ ಪೂರ್ವಜರು ಹಾವಿನೊಂದಿಗೆ ಆಡಿದರೆ, ನಾವು ಮೌಸ್ ಜೊತೆ ಆಡುತ್ತಿದ್ದೇವೆ. ನಿಮ್ಮ ಕ್ರಮಗಳು ಮತ್ತು ಮೌಲ್ಯಗಳಿಂದ ಅಮೆರಿಕದಲ್ಲಿ ವಿಪುಲ ಗೌರವ ಸಂಪಾದಿಸಿದ್ದೀರಿ.
 
6.ನಮ್ಮ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶೇ. 100ರಷ್ಟು ಯಶಸ್ವಿಯಾಗಲಿದೆ.
7.ಇಂದು ರಿಕ್ಷಾದಲ್ಲಿ ಅಹ್ಮದಾಬಾದ್‌ಗೆ ಪ್ರಯಾಣಿಸಲು ಕಿ.ಮೀ.ಗೆ 10ರೂಗಳಾದರೆ, ಮಂಗಳ ಗ್ರಹವನ್ನು ಮುಟ್ಟಲು ಕಿಮೀಗೆ ಕೇವಲ 7 ರೂ. ಸಾಕಾಗುತ್ತದೆ.
 ಇಂದು ವಿಶ್ವಕ್ಕೆ ಶಿಕ್ಷಕರು ಮತ್ತು ದಾದಿಯರ ಬೇಡಿಕೆಯಿದೆ. ಭಾರತದ ಯುವಜನಾಂಗ ಕೌಶಲ್ಯವೃದ್ಧಿಯ ಮೂಲಕ ಅವರ ಬೇಡಿಕೆಗಳನ್ನು ಪೂರೈಸಬೇಕು.
 
 8.ಇಂದು ಭಾರತದಲ್ಲಿ ಆಶಾಭಾವನೆ ಮತ್ತು ಉತ್ಸಾಹದ ವಾತಾವರಣವಿದ್ದು, ಭಾರತ ಬದಲಾವಣೆ ಬಯಸಿದೆ.
9. ಸಕಾರಾತ್ಮಕ ಬದಲಾವಣೆ ತರಲು, ಗುರಿ ಸಾಧನೆಗೆ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತದೆ ಎಂದು ಭರವಸೆ ನೀಡುತ್ತೇನೆ. ಭಾರತದಲ್ಲಿ ಬಡವರು ಬದಲಾವಣೆ ಬಯಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments