Select Your Language

Notifications

webdunia
webdunia
webdunia
webdunia

ವಿವಾಹ ಸಮಾರಂಭದಲ್ಲಿ ಆತ್ಮಾಹುತಿ ದಾಳಿ: 30 ಜನರು ಸಾವು

ವಿವಾಹ ಸಮಾರಂಭದಲ್ಲಿ ಆತ್ಮಾಹುತಿ ದಾಳಿ: 30 ಜನರು ಸಾವು
ಅಂಕಾರಾ , ಭಾನುವಾರ, 21 ಆಗಸ್ಟ್ 2016 (11:17 IST)
ವಿವಾಹದ ಸಮಾರಂಭದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಜನರು ಸಾವನ್ನಪ್ಪಿದ್ದು  94 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಸಿರಿಯಾ ಗಡಿಯಲ್ಲಿರುವ ತುರ್ಕಿಸ್ತಾನದ ಗಾಜಿಯಾಟೆಂಪ್ ನಗರದಲ್ಲಿ ನಡೆದಿದೆ. 
 
ನ್ಯಾಟೋ ಪಡೆಗಳ ನಿರಂತರ ದಾಳಿಯಿಂದ ಕಂಗಾಲಾಗಿರುವ ಐಸಿಸ್ ಸಂಘಟನೆ, ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಆತ್ಮಾಹುತಿ ದಾಳಿ ನಡೆಸಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
 
ತುರ್ಕಿಸ್ತಾನದ ಗಾಜಿಯಾಟೆಂಪ್ ನಗರದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 94 ಜನರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಅಲಿ ಯಾರ್ಲಿಕಾಯಾ ತಿಳಿಸಿದ್ದಾರೆ.
 
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಹೇಡಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಐಸಿಸ್ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
 
ಆತ್ಮಾಹುತಿ ದಾಳಿಯ ಹೊಣೆಯನ್ನು ಇಲ್ಲಿಯವರೆಗೆ ಯಾರೂ ಹೊತ್ತುಕೊಂಡಿಲ್ಲ. ಇದೊಂದು ಆತ್ಮಾಹುತಿ ದಾಳಿ ಎನ್ನುವುದು ಸ್ಪಷ್ಟವಾಗಿದೆ ಎಂದು ಹಿರಿಯ ಅಧಿಕಾರಿ ಮೆಹಮೆಟ್ ಎರ್ಡೊಗನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಮೂಲದ ಒಂದೇ ಕುಟುಂಬದ ಐವರು ಸದಸ್ಯರು ಐಸಿಸ್ ಸೇರ್ಪಡೆ