Select Your Language

Notifications

webdunia
webdunia
webdunia
webdunia

ಟರ್ಕಿ ರಾಜಧಾನಿ ಅಂಕಾರಾದಲ್ಲಿ ಅವಳಿ ಸ್ಫೋಟಕ್ಕೆ 30 ಜನರ ಬಲಿ

ಟರ್ಕಿ ರಾಜಧಾನಿ ಅಂಕಾರಾದಲ್ಲಿ ಅವಳಿ ಸ್ಫೋಟಕ್ಕೆ 30 ಜನರ ಬಲಿ
ಅಂಕಾರಾ , ಶನಿವಾರ, 10 ಅಕ್ಟೋಬರ್ 2015 (16:49 IST)
ಟರ್ಕಿ ರಾಜಧಾನಿ ಅಂಕಾರಾದ ಮುಖ್ಯ ರೈಲು ನಿಲ್ದಾಣಗಳಲ್ಲಿ ಸಂಭವಿಸಿದ ಎರಡು ಭೀಕರ ಸ್ಫೋಟಗಳಲ್ಲಿ ಕನಿಷ್ಟಪಕ್ಷ 30 ಜನರು ಸತ್ತಿದ್ದಾರೆ. ನೂರಾರು ಜನರು ಶಾಂತಿ ರಾಲಿಯಲ್ಲಿ ಪಾಲ್ಗೊಂಡಿದ್ದಾಗ ಈ ಸ್ಫೋಟಗಳು ಸಂಭವಿಸಿದ್ದು, ಸರ್ಕಾರಿ ಅಧಿಕಾರಿಗಳು ಇದನ್ನು ಭಯೋತ್ಪಾದನೆ ದಾಳಿ ಎಂದು ಬಣ್ಣಿಸಿದ್ದಾರೆ. 
 
ಸುಮಾರು 30 ದೇಹಗಳನ್ನು ಧ್ವಜಗಳು ಮತ್ತು ಬ್ಯಾನರ್‌ಗಳಿಂದ ಮುಚ್ಚಲಾಗಿದ್ದು, ರಕ್ತದ ಕಲೆಗಳು ಮತ್ತು ದೇಹಗಳ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಫೋಟದಲ್ಲಿ ಸುಮಾರು 126 ಜನರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
 
ದಾಳಿಯನ್ನು ಆತ್ಮಾಹುತಿ ಬಾಂಬರ್ ನಡೆಸಿದ್ದಾನೆಂಬ ಬಗ್ಗೆ ಅಧಿಕಾರಿಗಳು ಶಂಕಿಸಿದ್ದು, ಈ ಕುರಿತು ಪೊಲೀಸರು  ತನಿಖೆ ನಡೆಸಿದ್ದಾರೆ. ಟರ್ಕಿ ಭದ್ರತಾ ಪಡೆಗಳು ಕುರ್ದಿ ಉಗ್ರಗಾಮಿಗಳ ನಡುವೆ ಸಂಘರ್ಷದ ವಿರುದ್ಧ ಪ್ರತಿಭಟನೆಗೆ ಶಾಂತಿ ಮೆರವಣಿಗೆ ನಡೆಸಲು ಯೋಜಿಸಿ ನೂರಾರು ಜನರು ಸೇರಿದ್ದಾಗ   ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಕಳೆದ ಜುಲೈನಿಂದ ಸರ್ಕಾರ ಮತ್ತು ಕುರ್ದಿಸ್ತಾನ್ ವರ್ಕರ್ಸ್ ಪಕ್ಷದ ಉಗ್ರರ ನಡುವೆ ಹಿಂಸಾಚಾರ ತಾರಕಕ್ಕೇರಿತ್ತು. ಟರ್ಕಿ ಉಗ್ರಗಾಮಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ನೂರಾರು ಜನರು ಮೃತಪಟ್ಟಿದ್ದರು. 
 
 

Share this Story:

Follow Webdunia kannada