Select Your Language

Notifications

webdunia
webdunia
webdunia
webdunia

ಸ್ಪೇನ್‌ನಲ್ಲಿ ಪ್ರಾಣಿ ಹಕ್ಕು ಕಾರ್ಯಕರ್ತನನ್ನು ಬಾತುಕೋಳಿಯಿಂದ ಥಳಿಸಿದ ಮಹಿಳೆ

ಸ್ಪೇನ್‌ನಲ್ಲಿ ಪ್ರಾಣಿ ಹಕ್ಕು ಕಾರ್ಯಕರ್ತನನ್ನು ಬಾತುಕೋಳಿಯಿಂದ ಥಳಿಸಿದ ಮಹಿಳೆ
ರೋಸಸ್ , ಶುಕ್ರವಾರ, 28 ಆಗಸ್ಟ್ 2015 (21:04 IST)
ಪ್ರಾಣಿ ಹಕ್ಕುಗಳ ಕಾರ್ಯಕರ್ತನೊಬ್ಬನನ್ನು ಸ್ಪೇನ್ ಮಹಿಳೆಯೊಬ್ಬರು ಬಾತುಕೋಳಿಯಿಂದ ಹೊಡೆದು ವಿವಾದಾತ್ಮಕ ಸಾಂಪ್ರದಾಯಿಕ ಉತ್ಸವವನ್ನು ಸಮರ್ಥಿಸಿಕೊಂಡ ಘಟನೆ ನಡೆದಿದೆ.  ರೋಸಸ್ ಸಮುದ್ರತೀರದ ಪಟ್ಟಣದಲ್ಲಿ ಡಕ್ ಚೇಸ್ ಉತ್ಸವವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಸ್ಪೇನ್ ಮಹಿಳೆ ಬಾತುಕೋಳಿಯಿಂದಲೇ ಹೊಡೆದು ಅಟ್ಟಿದಳು.  ಪ್ರತಿ ವರ್ಷ ಆಗಸ್ಟ್‌ನಲ್ಲಿ ಮೆಡಿಟರೇನಿಯನ್ ಸಮುದ್ರಕ್ಕೆ ಬಾತುಕೋಳಿಗಳನ್ನು ಎಸೆದು ಈಜುಗಾರರು ಅವನ್ನು ಹಿಡಿದು ಪುನಃ ದಂಡೆಗೆ ತರುವುದು ಡಕ್ ಚೇಸ್ ವಾಡಿಕೆಯಾಗಿತ್ತು.
 
ಯುವ ಮಹಿಳೆ ಸ್ನಾನದ ಸೂಟ್ ಧರಿಸಿ ಬಾತುಕೋಳಿಯ ಕಾಲುಗಳನ್ನು ಹಿಡಿದು ಅವನಿಗೆ ಪದೇ ಪದೆ ಹೊಡೆದಳು. ದಾಳಿ ನಡೆಯುತ್ತಿದ್ದಾಗ, ಪ್ರಾಣಿ ಹಕ್ಕು ಕಾರ್ಯಕರ್ತರು ದಡದಲ್ಲಿ ಸೇರಿ ಮಹಿಳೆಯನ್ನು ಛೇಡಿಸುತ್ತಿದ್ದರು. 
 
ಬಾರ್ಸೆಲೋನಾದ ಉತ್ತರಕ್ಕಿರುವ ಪಟ್ಟಣದಲ್ಲಿ ಪ್ರತಿವರ್ಷ ಸುಮಾರು 50 ಬಾತುಕೋಳಿಗಳನ್ನು ಸಮುದ್ರಕ್ಕೆ ಎಸೆದ ಮೇಲೆ ಈಜುಗಾರರು ಈಜುತ್ತಾ ಅವುಗಳನ್ನು ದಡಕ್ಕೆ ತರುತ್ತಿದ್ದರು. ಬಾತುಕೋಳಿಗಳು ಸಾಯದಿದ್ದರೂ ಅವು ಒತ್ತಡದಿಂದ, ಆಂತರಿಕ ಗಾಯದಿಂದ, ನೋವಿನಿಂದ  ಮತ್ತು ಭಯದಿಂದ ನರಳುವುದರಿಂದ ಇದು ಪ್ರಾಣಿಗಳ ಕ್ರೂರ ಹಿಂಸೆಯಾಗಿದೆ ಎಂದು ಎನಿಮಲ್ ರೆಸ್ಕ್ಯೂ ಎಸ್ಪಾನಾ ತಿಳಿಸಿದೆ.

ಈ ಸಂಘಟನೆಯು ಚೇಂಜ್.ಆರ್ಗ್ ವೆಬ್‌ಸೈಟ್‌ನಲ್ಲಿ ಮನವಿಯೊಂದನ್ನು ಪ್ರಕಟಿಸಿ, ರೋಸಸ್ ಡಕ್ ಚೇಸ್ ಮತ್ತು ಗೂಳಿ ಓಟವನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. 
 

Share this Story:

Follow Webdunia kannada