Webdunia - Bharat's app for daily news and videos

Install App

ಇದು ವೈನ್ ಕಾರಂಜಿ, ಸಂಪೂರ್ಣ ಉಚಿತ!

Webdunia
ಶುಕ್ರವಾರ, 28 ಅಕ್ಟೋಬರ್ 2016 (10:40 IST)
ರೋಮ್: ಒಂದು ಗುಟುಕು ನೀರು ಕುಡಿಯೋಕೆ ಪರದಾಡೋ ಈ ದಿನಮಾನಗಳಲ್ಲಿ, ದಿನದ ಇಪ್ಪತ್ನಾಲ್ಕು ಗಂಟೆ ಕಾಲವೂ ಕಾರಂಜಿಯೊಂದು ವೈನ್ ಚಿಮ್ಮಿಸುತ್ತವೆ ಎಂದರೆ...!

ಹೌದು, ಇಂತಹ ಆಶ್ಚರ್ಯಕರ ದೃಶ್ಯ ಇಟಲಿಯ ಕಾಲಾದ್ರಿ ಡಿ ಒರಟೊನದಲ್ಲಿ ಕಂಡು ಬರುತ್ತವೆ. ಈ ಕಾರಂಜಿ ಕೆಂಪು ವೈನ್ ನಿಂದ ಕೂಡಿದ್ದು, ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಎನ್ನುವುದು ವಿಶೇಷ.
 
ವಾರದ ಪ್ರತಿ ದಿನಗಳಲ್ಲೂ ದಿನದ 24 ಘಂಟೆಗಳವರೆಗೂ ಚಿಮ್ಮುವ 'ಫಾಂಟನ ಡೆಲ್ ವಿನೋ' ಕಾರಂಜಿಯ ಹಿಂದೆ ಯಾವುದೇ ಗಿಮಿಕ್ ಇಲ್ಲ. ಅಲ್ಲದೆ, ಈ ಕಾರಂಜಿ ಕುಡುಕರಿಗೂ ಅಲ್ಲ ಎಂದು ಕಾರಂಜಿ ಮಾಲೀಕ ವೈನ್ಯಾರ್ಡ್ ತಿಳಿಸಿದ್ದಾರೆ.
 
ಏನಾದರೂ ವಿಶೇಷವಾದದ್ದನ್ನು ಪ್ರಪಂಚಕ್ಕೆ ಬಿಟ್ಟು ಹೋಗಬೇಕೆನ್ನುವ ಕನಸನ್ನು ಮೊದಲಿನಿಂದಲೂ ಇಟ್ಟುಕೊಂಡಿದ್ದೆ. ಅದು ಕೂಡಾ ಈ ಹಿಂದೆ ಇಟಲಿಯ ಇತಿಹಾಸದಲ್ಲಿ ಕೇಳರಿಯದ ಸೇವೆಯನ್ನು ಒದಗಿಸಬೇಕೆನ್ನುವುದು ಮಹದಾಸೆಯಾಗಿತ್ತು. ಅದಕ್ಕೆಲ್ಲ ತಲೆಯಲ್ಲಿ ಹೊಳೆದದ್ದೇ ವೈನ್ ಕಾರಂಜಿ ಕಲ್ಪನೆ. ಅದಕ್ಕೊಂದು ಮೂರ್ತರೂಪ ಕೊಟ್ಟು ನಿರಂತರ ವೈನ್ ಚಿಮ್ಮುವಂತೆ ಮಾಡಿದ್ದೇನೆ ಎಂದು ಮಾಲೀಕ ಹೇಳುತ್ತಾರೆ.
 
ಒಟ್ಟಾರೆ, ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಉಚಿತ ವೈನ್ ನೀಡುವ ಮೊದಲ ಕಾರಂಜಿ ಇದಾಗಿದೆ. ಹಾಗಂತ ಆ ಉಚಿತ ವೈನ್ ಕುಡುಕರಿಗಲ್ಲ. ಪ್ರವಾಸಕ್ಕೆಂದು ಬರುವ ಸಾರ್ವಜನಿಕರಿಗೆ ಮಾತ್ರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments