Select Your Language

Notifications

webdunia
webdunia
webdunia
webdunia

ಉಕ್ರೇನ್‌ಗೆ 50 ದಶಲಕ್ಷ ಡಾಲರ್ ಅಮೆರಿಕ ನೆರವಿನ ಪ್ರಸ್ತಾಪ

ಉಕ್ರೇನ್‌ಗೆ 50 ದಶಲಕ್ಷ ಡಾಲರ್ ಅಮೆರಿಕ ನೆರವಿನ ಪ್ರಸ್ತಾಪ
, ಮಂಗಳವಾರ, 22 ಏಪ್ರಿಲ್ 2014 (21:03 IST)

ಕೀವ್:ಅಮೆರಿಕವು ಉಕ್ರೇನ್‌ಗೆ 50 ದಶಲಕ್ಷ ಡಾಲರ್ ನೆರವಿನ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿದೆ. ಉಕ್ರೇನ್ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗೆ ನೆರವಾಗಲು ಅಮೆರಿಕ ಈ ಪ್ರಸ್ತಾಪವನ್ನು ಮಂಡಿಸಿದೆ ಎಂದು ಉಪಾಧ್ಯಕ್ಷ ಜೋಯಿ ಬಿಡನ್ ಕೀವ್‌ಗೆ ಭೇಟಿ ಮಾಡಿದ ಸಂದರ್ಭದಲ್ಲಿ ಶ್ವೇತಭವನ ತಿಳಿಸಿದೆ.

ಹೆಚ್ಚುವರಿ 8 ದಶಲಕ್ಷ ಡಾಲರ್ ಮಾರಕವಲ್ಲದ ಮಿಲಿಟರಿ ನೆರವನ್ನು ಕೂಡ ಅಮೆರಿಕ ಪ್ರಸ್ತಾಪ ಮಾಡಿದೆ. ಇದರಲ್ಲಿ ರೇಡಿಯೊ, ವಾಹನಗಳು ಇರುತ್ತವೆ ಎಂದು ಕೀವ್‌ನ ಬಿಡೆನ್ ಸಿಬ್ಬಂದಿ ನೀಡಿದ ಹೇಳಿಕೆ ತಿಳಿಸಿದೆ.ಕ್ರೆಮ್ಲಿನ್ ಬೆಂಬಲಿತ ಅಧ್ಯಕ್ಷರ ಪದಚ್ಯುತಿ ಮತ್ತು ರಷ್ಯಾ ಜತೆ ಸಂಘರ್ಘ ಮುಂದುವರಿದ ಬಳಿಕ ಹೊಸ ಅಧಿಕಾರವರ್ಗಕ್ಕೆ ಬೆಂಬಲದ ಸ್ಪಷ್ಟ ಪ್ರದರ್ಶನ ಇದಾಗಿದೆ. ಹೊರಗಿನ ಶಕ್ತಿಗಳ ಒತ್ತಡವಿಲ್ಲದೇ ದೇಶದ ಭವಿಷ್ಯವನ್ನು ನಿರ್ಧರಿಸಲು ಉಕ್ರೇನ್ ಮಾತ್ರ ಬದ್ಧವಾಗಿದೆ ಎಂದು ಅಮೆರಿಕ ತಿಳಿಸಿದೆ.


Share this Story:

Follow Webdunia kannada