Webdunia - Bharat's app for daily news and videos

Install App

ವಿಲಕ್ಷಣ ಘಟನೆ: ಮಾಲೀಕನ ಮೇಲೆ ಗುಂಡು ಹಾರಿಸಿದ ನಾಯಿ

Webdunia
ಸೋಮವಾರ, 22 ಡಿಸೆಂಬರ್ 2014 (12:49 IST)
ಸಾಕುಪ್ರಾಣಿಗಳಿಗೆ ಹೊಸ ಹೊಸ ವಿಷಯಗಳನ್ನು ಕಲಿಸಿಕೊಟ್ಟು ಚಾಣಾಕ್ಷ, ಚೂಟಿ ಮಾಡಿ ಎಲ್ಲರ ಗಮನ ಸೆಳೆಯುವಂತೆ ಮಾಡುವುದು  ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ನಿಮಗೂ ಕೂಡ ಪ್ರಾಣಿಗಳಿಗೆ ಭಿನ್ನ ವಿಭಿನ್ನ ರೀತಿಯಲ್ಲಿ ಪಳಗಿಸುವ ಹವ್ಯಾಸವಿದ್ದರೆ, ಈ ವಿಷಯದಲ್ಲಿ ಸ್ವಲ್ಪಯೋಚಿಸಿ ಮುಂದುವರೆಯಿರಿ. ಯಾಕೆಂದರೆ ನಾಯಿಯೊಂದನ್ನು ಪಳಗಿಸಲು ಹೋದ ಮಾಲೀಕ ತನ್ನ ಪ್ರಾಣಕ್ಕೆ ಆಪತ್ತು ತಂದುಕೊಂಡ ಘಟನೆ ಅಮೇರಿಕಾದಲ್ಲಿ ನಡೆದಿದೆ. ಸಾಕಿದ್ದ ನಾಯಿಯಿಂದಲೇ ಗುಂಡೇಟು ತಿಂದ ಆತ ಈಗ ಆಸ್ಪತ್ರೆಗೆ ಸೇರಿದ್ದಾನೆ.
ಇಂಗ್ಲೀಷ್ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ 46 ವರ್ಷದ ರಿಚರ್ಡ್ ಎಂಬುವವರು ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾದರು. ಅವರಿಗೆ ಗುಂಡು ಹೊಡೆದವರು ಯಾರು ಎಂದು ಪರಿಶೀಲಿಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಅವರ ಮುದ್ದಿನ ನಾಯಿಯಿಂದಲೇ ಅವರಿಗೆ ಗುಂಡು ತಗುಲಿತ್ತು. 
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ರಿಚರ್ಡ್ ತಮ್ಮ ಬ್ಯಾಗ್‌ನಲ್ಲಿ ಲೋಡ್ ಆದ ರೈಫಲ್ ಒಂದನ್ನು ಕಾರಿನಲ್ಲಿ ಇಟ್ಟಿದ್ದರು. ಅವರ ಬ್ಯಾಗ್ ತೆರೆದಿತ್ತು. ಕಾರಿನ ಗಾಜು ಐಸ್‌ಮಯವಾಗಿದ್ದರಿಂದ ಅವರದನ್ನು ಒರೆಸಲು ಪ್ರಾರಂಭಿಸಿದರು. ಆ ಸಮಯಕ್ಕೆ ಅಲ್ಲಿಗೆ ಬಂದ ಅವರ ನಾಯಿ ಬ್ಯಾಗ್ ಮೇಲೆ ಹತ್ತಿದೆ. ನಾಯಿಯ ಭಾರಕ್ಕೆ ಲೋಡ್ ಆಗಿದ್ದ ಅವರ ರೈಫಲ್‌ನಿಂದ ಗುಂಡು ಹಾರಿ ರಿಚರ್ಡ್ ಕೈಗೆ ಗಂಭೀರ ಗಾಯವಾಗಿದೆ.  
 
ಈಗ ರಿಚರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್  ಅಧಿಕಾರಿ ಸ್ಟೀವ್ ಕೊಯ್ಸೇಕ್ ತಮ್ಮ 42 ವರ್ಷಗಳ ಸೇವಾವಧಿಯಲ್ಲಿ  ನಾಯಿಯೊಂದು ಮನುಷ್ಯನಿಗೆ ಗುಂಡು ಹಾರಿಸಿದ ಪ್ರಕರಣವನ್ನು ನೋಡುತ್ತಿರುವುದು ಇದೇ ಮೊದಲು ಎಂದಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments