Select Your Language

Notifications

webdunia
webdunia
webdunia
webdunia

ಹೆಬ್ಬಾವನ್ನು ತಿಂದ ವ್ಯಕ್ತಿಗೆ 9 ವರ್ಷ ಜೈಲು ಶಿಕ್ಷೆ

ಹೆಬ್ಬಾವನ್ನು ತಿಂದ ವ್ಯಕ್ತಿಗೆ 9 ವರ್ಷ ಜೈಲು ಶಿಕ್ಷೆ
ಜೋಹಾನ್ಸ್‌ಬರ್ಗ್ , ಭಾನುವಾರ, 1 ಫೆಬ್ರವರಿ 2015 (17:01 IST)
ಹೆಬ್ಬಾವಿನ ಮಾಂಸವನ್ನು ತಿಂದ ಆರೋಪದ ಮೇಲೆ ಜಿಂಬಾಬ್ವೆ ಪ್ರಜೆಯೊಬ್ಬನಿಗೆ 9 ವರ್ಷಗಳ ಜೈಲು ಶಿಕ್ಷೆಗೆ ಗುರಿಮಾಡಲಾಗಿದೆ. ಹಾವಿನ ಔಷಧೀಯ ಗುಣಗಳ ಹಿನ್ನೆಲೆಯಲ್ಲಿ ಅದರ ಮಾಂಸ ತಿನ್ನುತ್ತಿದ್ದೆ ಎಂದು ಆರ್ಕ್ವೆಲ್ ಮರಾಂಬ ತಿಳಿಸಿದ್ದಾನೆ.

ಹೆಬ್ಬಾವನ್ನು ಸಂರಕ್ಷಿತ ಪ್ರಾಣಿ ಎಂದು ಅಲ್ಲಿ ಪರಿಗಣಿಸಲಾಗಿದೆ. ಬೆನ್ನು ನೋವಿನಿಂದ ನರಳುತ್ತಿದ್ದ ತಾನು ಹೆಬ್ಬಾವಿನ ಮಾಂಸ ತಿಂದಿದ್ದಾಗಿ ಅವನು ಹೇಳಿದ್ದಾನೆ. ಮೊದಲ ಬಾರಿ ಹಾವಿನ ಮಾಂಸ ತಿಂದಾಗ ಬೆನ್ನು ಗಣನೀಯ ಸುಧಾರಣೆಯಾಗಿತ್ತು ಎಂದು ತಿಳಿಸಿದ್ದಾನೆ.

ಹಾವಿನ ಚರ್ಮ ಒಣಗಿಸಲು ಇಟ್ಟಿದ್ದ ಮತ್ತು ಮಾಂಸವನ್ನು ಸಂಗ್ರಹಿಸಿದ್ದ ಸುಳಿವು ಸಿಕ್ಕಿ ಪೊಲೀಸರು ಮನೆಯ ಮೇಲೆ ದಾಳಿ ಮಾಡಿದ್ದರು. 

Share this Story:

Follow Webdunia kannada