Webdunia - Bharat's app for daily news and videos

Install App

9/11 ದಾಳಿ-ಅಲ್ ಖೈದಾದಿಂದ ವೀಡಿಯೋ ಬಿಡುಗಡೆ

Webdunia
ಮಂಗಳವಾರ, 13 ಸೆಪ್ಟಂಬರ್ 2011 (20:48 IST)
ಅಮೆರಿಕದ ಮೇಲೆ 9/11 ದಾಳಿ ನಡೆದು 10 ವರ್ಷ ಪೂರೈಸಿರುವ ಸಂದರ್ಭದಲ್ಲೇ ಅಲ್‌ಖೈದಾ ಉಗ್ರಗಾಮಿ ಸಂಘಟನೆ ಜಿಹಾದ್‌ ವೆಬ್‌ಸೈಟ್‌ಗಳಲ್ಲಿ 9/11 ದಾಳಿಯ ಒಂದು ಗಂಟೆ ಕಾಲಾವಧಿಯ ವೀಡಿಯೋ ಬಿಡುಗಡೆ ಮಾಡಿದೆ ಎಂದು ಖಾಸಗಿ ಬೇಹುಗಾರಿಕಾ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಲ್‌ಖೈದಾದ ಹೊಸ ನಾಯಕ ಐಮನ್‌ ಅಲ್‌ ಜವಾಹಿರಿ ಅವರ ಭಾಷಣ ಹಾಗೂ ಮಾಜಿ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಅವರು ಇರುವ ವೀಡಿಯೋ ದೃಶ್ಯಾವಳಿಗೆ ದಿ ಡಾನ್‌ ಆಫ್‌ ಇಮಿನೆಂಟ್‌ ವಿಕ್ಟರಿ ಎಂಬ ತಲೆಬರಹ ನೀಡಲಾಗಿದೆ. ಸೋಮವಾರ ಜಿಹಾದಿ ವೆಬ್‌ಸೈಟ್‌ಗಳಿಗೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಐಮನ್‌ ಅಲ್‌ ಜವಾಹಿರಿಯ ಫೋಟೋ ಕೂಡಾ ಇದೆ.

ಅಮೆರಿಕದ ಸೀಲ್‌ ಕಮಾಂಡೋ ಪಡೆಗಳು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಲ್‌ಖೈದಾ ಮುಖಂಡ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿದ ನಂತರ ಈಗಿನ ಅಲ್‌ ಖೈದಾ ಮುಖಂಡ ಐಮನ್‌ ಅಲ್‌ ಜವಾಹಿರಿ ತಮ್ಮ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ಅಮೆರಿಕ ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

9 /11 ದಾಳಿಯ ದಶಮಾನೋತ್ಸವದ ಸಂದರ್ಭದಲ್ಲಿ ಉಗ್ರಗಾಮಿಗಳು ವಾಷಿಂಗ್ಟನ್‌ ಮತ್ತು ನ್ಯೂಯಾರ್ಕ್‌ ಮೇಲೆ ದಾಳಿ ನಡೆಸುವ ಬಗ್ಗೆ ಮಾಹಿತಿ ದೊರೆತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments