Select Your Language

Notifications

webdunia
webdunia
webdunia
webdunia

729 ಜನರ ಬೆತ್ತಲೆಸ್ನಾನದ ಮೂಲಕ ಗಿನ್ನಿಸ್ ದಾಖಲೆ

729 ಜನರ ಬೆತ್ತಲೆಸ್ನಾನದ ಮೂಲಕ ಗಿನ್ನಿಸ್ ದಾಖಲೆ
, ಬುಧವಾರ, 2 ಏಪ್ರಿಲ್ 2014 (15:01 IST)
ಸ್ಪೇನ್: ಆಗ್ನೇಯ ಸ್ಪೇನ್‌ ನಗರ ವೆರಾದ ಬೀಚ್‍‌ನಲ್ಲಿ ಒಂದೇ ಬಾರಿಗೆ 729 ಜನರು ಬೆತ್ತಲೆಯಾಗಿ ಸಮುದ್ರಸ್ನಾನ ಮಾಡುವ ಮೂಲಕ ಸಾಮೂಹಿಕ ನಗ್ನ ಸಮುದ್ರಸ್ನಾನದಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ. 506 ಬೆತ್ತಲೆ ಸ್ನಾನ ಮಾಡಿದವರೊಂದಿಗೆ ನಂ. 1 ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನಿಂದ ಆ ಗೌರವವನ್ನು ಅದು ಕಸಿದುಕೊಂಡಿದೆ.

'ವರ್ಡ್ಸ್ ಬಿಗ್ಗೆಸ್ಟ್ ಸ್ಟ್ರಿಫ್‌ಆಫ್' ಘೋಷಣೆಯೊಂದಿಗೆ ಅಲ್ಮೇರಿಯಾ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಪಟ್ಟಣದಲ್ಲಿ ಬಟ್ಟೆ ಕಳಚಿ ಸ್ನಾನ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸಿದ ನೂರಾರು ಜನರನ್ನು ಇದು ಆಕರ್ಷಿಸಿತು. ಬೀಚ್ ಪ್ರವೇಶದ್ವಾರದಲ್ಲಿ ಭಾಗಿಗಳ ಎಣಿಕೆ ಮಾಡಿ 50 ಜನರ ಗುಂಪುಗಳನ್ನು ಮಾಡಿ ಅವರ ನೋಂದಣಿ ಸಂಖ್ಯೆಯೊಂದಿಗೆ ಟಿಕೆಟ್ ನಂಬರ್ ನೀಡಲಾಯಿತು.

ಹೊಸ ದಾಖಲೆ ಸ್ಥಾಪಿಸುವ ಮೂಲಕ ವೆರಾ ತನ್ನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಉತ್ತೇಜಿಸಲು ಮತ್ತು ಅಂತರರಾಷ್ಟ್ರೀಯ ನಗ್ನ ಕೇಂದ್ರವಾಗಿ ರೂಪುಗೊಳ್ಳಲು ತಯಾರಿ ನಡೆಸಿದೆ.

Share this Story:

Follow Webdunia kannada