Select Your Language

Notifications

webdunia
webdunia
webdunia
webdunia

59 ದಿನಗಳ ಕಾಲ ನಿದ್ರೆಗೆ ಶರಣಾದ ಸ್ಲೀಪಿಂಗ್ ಬ್ಯೂಟಿ

59 ದಿನಗಳ ಕಾಲ ನಿದ್ರೆಗೆ ಶರಣಾದ ಸ್ಲೀಪಿಂಗ್ ಬ್ಯೂಟಿ
, ಗುರುವಾರ, 22 ಆಗಸ್ಟ್ 2013 (13:27 IST)
PR
PR
ಲಂಡನ್: ಆಗ್ನೇಯ ಲಂಡನ್‌ನಲ್ಲಿ ಇಮಾರಲ್ ಡೂಪ್ರೆ ಎಂಬ 23 ವರ್ಷ ವಯಸ್ಸಿನ ಯುವತಿಯೊಬ್ಬಳು ವಿಚಿತ್ರ ಅವ್ಯವಸ್ಥೆಯಿಂದ ಬಳಲುತ್ತಿದ್ದಾಳೆ. ಯುವತಿಯನ್ನು ಆವರಿಸಿರುವುದು ನಿದ್ರಾರೋಗ. ಇವಳು ಕೆಲವು ದಿನಗಳವರೆಗೆ ಮಾತ್ರ ಸತತವಾಗಿ ನಿದ್ರಾಲೋಕಕ್ಕೆ ಶರಣಾಗುವುದಿಲ್ಲ. ಕೆಲವು ಬಾರಿ ತಿಂಗಳುಗಳ ಕಾಲ ನಿದ್ರೆಗೆ ಜಾರುತ್ತಾಳೆ. ಕಳೆದ ವರ್ಷ ಇಮ್ರಾಲ್ ಡೂಪ್ರೆ ಸತತವಾಗಿ 59 ದಿನಗಳ ಕಾಲ ನಿದ್ರೆಗೆ ಶರಣಾಗಿದ್ದಾಳೆ. ಡೂಪ್ರೆಗೆ ಆವರಿಸಿರುವ ರೋಗಕ್ಕೆ ಕ್ಲೈನ್ ಲೆವಿನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದಕ್ಕೆ ಸ್ಲೀಪಿಂಗ್ ಬ್ಯೂಟಿ ಲಕ್ಷಣ ಎಂಬ ಹಣೆಪಟ್ಟಿ ಹಚ್ಚಲಾಗಿದೆ.

ಈ ಲಕ್ಷಣವು ಜಗತ್ತಿನಲ್ಲಿ ಕೇವಲ 1000 ಜನರಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಅವರಿಗೆ ಯಾವುದೇ ಎಚ್ಚರಿಕೆ ನೀಡದೇ ತೂಕಡಿಕೆಗೆ ಒಳಪಡುತ್ತಾರೆಂದು ಹೇಳಲಾಗಿದೆ.ಇದು ನಮ್ಮ ಕುಟುಂಬದ ಮೇಲೆ ದೊಡ್ಡ ಪರಿಣಾಮವನ್ನು ಬೀರಿದೆ ಎಂದು ಇಮ್ರಾಲ್ ಹೇಳಿದ್ದಾರೆ. ಕೆಎಲ್‌ಎಸ್ ಮುಂಚಿನ ದಿನಗಳಲ್ಲಿ ನನ್ನ ತಾಯಿ ನನಗೆ ಒಂದು ರೀತಿಯ ಬ್ರೇಕ್‌ಡೌನ್ ಆಗಿರಬಹುದೆಂದು ಭಾವಿಸಿದ್ದರು.

ನನ್ನ ಸೋದರಿ ವಿವಿಯ ಉಪನ್ಯಾಸಗಳನ್ನು ತಪ್ಪಿಸಿಕೊಂಡು ನನ್ನ ಆರೈಕೆ ಮಾಡತೊಡಗಿದಳು ಮತ್ತು ನನ್ನ ತಾಯಿ ಕೂಡ ಕೆಲಸಕ್ಕೆ ರಜಾ ಹಾಕುತ್ತಿದ್ದರು ಎಂದು ಇಮ್ರಾಲ್ ಹೇಳಿದ್ದಾಳೆ. ಕ್ಲೈನ್ ಲೆವಿನ್ ಸಿಂಡ್ರೋಮ್ ನರಗಳ ಸ್ಥಿತಿಯಾಗಿದ್ದು, ಹರೆಯದ ಸಂದರ್ಭದಲ್ಲಿ ಉಂಟಾಗುತ್ತದೆ. ಇದು ಸೋಂಕು ಅಥವಾ ರೋಗದ ಬಳಿಕ ಕಾಣಿಸಿಕೊಳ್ಳುತ್ತದೆ. ಸುಮಾರು 20 ದಿನಗಳಿಂದ ಹಿಡಿದು ಕೆಲವು ವಾರಗಳವರೆಗೆ ನಿದ್ರೆಗೆ ಶರಣಾಗುವ ಇವರಿಗೆ ಈ ಜಗತ್ತಿನ ಪರಿವೇ ಇರುವುದಿಲ್ಲ.

Share this Story:

Follow Webdunia kannada