Select Your Language

Notifications

webdunia
webdunia
webdunia
webdunia

ಕೊಲಂಬೊ ಜೈಲಿನಿಂದ ಐವರು ಮೀನುಗಾರರ ಬಿಡುಗಡೆ

ಕೊಲಂಬೊ ಜೈಲಿನಿಂದ ಐವರು ಮೀನುಗಾರರ ಬಿಡುಗಡೆ
ಕೊಲಂಬೊ , ಬುಧವಾರ, 19 ನವೆಂಬರ್ 2014 (18:16 IST)
ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಮೀನುಗಾರರನ್ನು ಶ್ರೀಲಂಕಾ ಕೋರ್ಟ್ ಬಿಡುಗಡೆ ಮಾಡಿದೆ.  ಮಾದಕವಸ್ತು ಹೊಂದಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಐವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದಾಗ ಶ್ರೀಲಂಕಾ ಸುಪ್ರೀಂಕೋರ್ಟ್ ಐವರಿಗೂ ಮರಣದಂಡನೆ ಶಿಕ್ಷೆ ವಿಧಿಸಿದ್ದರಿಂದ ಭಾರತದಲ್ಲಿ ವ್ಯಾಪಕ ಪ್ರತಿಭಟನೆ ಕೇಳಿಬಂದಿತ್ತು. 
 
 ಕೆಲವು ದಿನಗಳ ಹಿಂದೆ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷಾ ಐವರು ಮೀನುಗಾರರಿಗೆ ಕ್ಷಮಾಪಣೆ ನೀಡುವ ಭರವಸೆ ನೀಡಿದ್ದರು.ಇದನ್ನು ಕೇಂದ್ರ ಸರ್ಕಾರದ ಸಾಧನೆ ಎಂದು ಬಿಜೆಪಿ ಮುಖಂಡ ನರಸಿಂಹ ಕರೆದಿದ್ದು, ಈ ಪ್ರಕಟಣೆ ಭಾವುಕಕ್ಷಣವಾಗಿದ್ದು, ಕೇಂದ್ರದ ಪ್ರಯತ್ನದಿಂದ ಸಾಧ್ಯವಾಗಿದೆ ಎಂದಿದ್ದಾರೆ. 
 
 ಮೀನುಗಾರರ ಬಿಡುಗಡೆಗೆ ಪ್ರಧಾನಿ ಪ್ರಯತ್ನಕ್ಕೆ ಪಕ್ಷ ಮೆಚ್ಚುಗೆ ಸೂಚಿಸಿದೆ ಎಂದು ಡಿಎಂಕೆ ನಾಯಕ ಎಳಂಗೋವನ್ ತಿಳಿಸಿದ್ದಾರೆ. ಭಾರತದ ಮೇಲ್ಮನವಿ ವಾಪಸು ಪಡೆಯುವಂತೆ ಅಧ್ಯಕ್ಷ ರಾಜಪಕ್ಷೆ ಒತ್ತಾಯಿಸಿದ್ದರು. ಏಕೆಂದರೆ, ಅದು ಈ ಪ್ರಕರಣವನ್ನು 6 ತಿಂಗಳವರೆಗೆ ಎಳೆದು ಅಧ್ಯಕ್ಷರು ಕ್ಷಮಾಪಣೆ ನೀಡುವುದನ್ನು ವಿಳಂಬಿಸುತ್ತದೆ. 

Share this Story:

Follow Webdunia kannada