Select Your Language

Notifications

webdunia
webdunia
webdunia
webdunia

ಪಾಕ್‌ನಲ್ಲಿ ಸ್ಟೆರಾಯ್ಡ್ ಹಾವಳಿ: 17 ದಿನಗಳಲ್ಲಿ 4 ಬಾಡಿಬಿಲ್ಡರ್‌‌ಗಳ ಸಾವು

ಪಾಕ್‌ನಲ್ಲಿ ಸ್ಟೆರಾಯ್ಡ್ ಹಾವಳಿ:  17 ದಿನಗಳಲ್ಲಿ 4 ಬಾಡಿಬಿಲ್ಡರ್‌‌ಗಳ ಸಾವು
ಇಸ್ಲಾಮಾಬಾದ್ , ಬುಧವಾರ, 20 ಏಪ್ರಿಲ್ 2016 (17:23 IST)
17 ದಿನಗಳಲ್ಲಿ ನಾಲ್ಕು ಬಾಡಿಬಿಲ್ಡರ್‌ಗಳ ನಿಗೂಢ ಸಾವು ಪಾಕಿಸ್ತಾನದಲ್ಲಿ ಸಂಭವಿಸಿದೆ. ದೇಹದಾರ್ಢ್ಯ ಪಟುಗಳು ಅಕ್ರಮ ಸ್ಟೆರಾಯ್ಡ್‌ಗಳನ್ನು ಬಳಸಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.  ದಕ್ಷಿಣ ಏಷ್ಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಷಿಪ್‌ನ ಇಬ್ಬರು ಪದಕ ವಿಜೇತರು ಸೇರಿದಂತೆ ಯಶಸ್ಸಿಗೆ ಅಡ್ಡಹಾದಿ ಹಿಡಿಯುತ್ತಿರುವ ಪಾಕಿಸ್ತಾನದ ದೇಹದಾರ್ಢ್ಯ ಪಟುಗಳು ಈ  ಔಷಧಿಗಳ ವಿಪರೀತ ಬಳಕೆಯಿಂದ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. 
 
 
ಈ ದುರಂತ ಸಾವಿನಲ್ಲಿ ಇತ್ತೀಚಿನ ಸೇರ್ಪಡೆ ಮಕ್ಲೂಬ್ ಹೈದರ್. ಅವರಿಗಿಂತ ಮುಂಚೆ ಕುಸ್ತಿ ಪಟು ರಿಜ್ವಾನ್, ಸೆಎಬಿಸಿ ಚಿನ್ನದ ಪದಕ ವಿಜೇತ ಹುಮಾಯೂನ್ ಕುರ್ರಾಮ್ ಮತ್ತು ಹಮೀದ್ ಅಲಿ ನಿಗೂಢ ಸನ್ನಿವೇಶಗಳಲ್ಲಿ ಜೀವ ಕಳೆದುಕೊಂಡಿದ್ದಾರೆ
 
 ಕುರ್ರಾಮ್ ಊಟ ಸೇವಿಸುತ್ತಿದ್ದಾಗ ಅವರ ಆಹಾರದ ನಾಳ ಒಡೆದು ಹಠಾತ್ತಾಗಿ ಸತ್ತಿದ್ದಾರೆ. ಆದರೆ ಕುರ್ರಾಮ್ ಕುಟುಂಬ ಮಾತ್ರ ಅವರು ಯಾವುದೇ ಸ್ಟೆರಾಯ್ಡ್ ಸೇವಿಸಿಲ್ಲವೆಂದು ಹೇಳಿದ್ದಾರೆ. 
 
ದುಬೈ ಮತ್ತು ಇರಾನ್‌ನಿಂದ ಸ್ಟೆರಾಯ್ಡ್ ಮತ್ತು ದೇಹ ವರ್ಧನೆಯ ಮದ್ದುಗಳು ಅಕ್ರಮವಾಗಿ ಪಾಕ್‌ಗೆ ಲಗ್ಗೆ ಹಾಕಿದ್ದು, ಕೆಲವು ಎಕ್ಸ್‌ಪೈರಿ ದಿನಾಂಕಗಳು ಮುಗಿದಿವೆ ಎಂದು ವರದಿಯೊಂದು ತಿಳಿಸಿದೆ. 

Share this Story:

Follow Webdunia kannada