Webdunia - Bharat's app for daily news and videos

Install App

ಯುವಕನ ಮೇಲೆ ಮೂವರು ಮಹಿಳೆಯರಿಂದ 3 ದಿನ ನಿರಂತರ ಅತ್ಯಾಚಾರ

Webdunia
ಬುಧವಾರ, 31 ಮೇ 2017 (14:05 IST)
ದಕ್ಷಿಣ ಆಫ್ರಿಕಾದಲ್ಲಿ ಪುರುಷರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಚ್ಚರಿ ಎನಿಸಿದರೂ ಸತ್ಯ. 23 ವರ್ಷದ ಟ್ಯಾಕ್ಸಿ ಡ್ರೈವರ್ ಒಬ್ಬನನ್ನ ಅಪಹರಿಸಿರುವ ಮೂವರು ಲಜ್ಜೆಗೆಟ್ಟ ಮಹಿಳೆಯರು 3 ದಿನ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪ್ರಿಟೋರಿಯಾದಲ್ಲಿ ನಡೆದಿದೆ.
 

15 ಸೀಟರ್ ಟ್ಯಾಕ್ಸಿ ಬಾಡಿಗೆಗೆ ಪಡೆದ ಮಹಿಳೆಯರು ದೂರ ಹೋಗುತ್ತಿದ್ದಂತೆ ಡ್ರೈವರ್ ಮೇಲೆ ದಾಳಿ ನಡೆಸಿ ಕಾರಿನ ದಿಕ್ಕು ಬದಲಿಸಿದ್ದಾರೆ. ಟ್ಯಾಕ್ಸಿ ಚಾಲಕನಿಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿ ಅಜ್ಞಾತ ಮನೆಗೆ ಕರೆದೊಯ್ದಿದ್ದಾರೆ. ಚಾಲಕನಿಗೆ ಪ್ರಜ್ಞೆ ಬಂದಾಗ ಅಜ್ಞಾತ ಕೊಠಡಿಯಲ್ಲಿ ಕೂಡಿ ಹಾಕಿರುವುದು ಗೊತ್ತಾಗಿದೆ. ಬಳಿಕ ಎನರ್ಜಿ ಡ್ರಿಂಕ್ಸ್ ಕುಡಿಸಿದ ಮಹಿಳೆಯರು ಒಬ್ಬರ ಬಳಿಕ ಒಬ್ಬರಂತೆ ಮೂವರು ಮಹಿಳೆಯರು ಸಿಂಗಲ್ ಬೆಡ್ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮೂರು ದಿನ ಯುವಕನನ್ನ ನಿದ್ದೆ ಮಾಡಲು ಬಿಡದೇ ಎನರ್ಜಿ ಡ್ರಿಂಕ್ಸ್ ಕುಡಿಸಿ ತಮ್ಮ ಕಾಮತೃಷೆ ತೀರಿಸಿಕೊಂಡು ಬಳಿಕ ಬಯಲು ಪ್ರದೇಶದಲ್ಲಿ ಅರೆವೆತ್ತಲಾಗಿ ಯುವಕನನ್ನ ಎಸೆದು ಪರಾರಿಯಾಗಿದ್ದಾರೆ.

ಘಟನೆ ಕುರಿತಂತೆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಷ್ಟು ಗಂಭೀರವಾಗಿ ಯುವಕರ ಮೇಲಿನ ರೇಪ್ ಪ್ರಕರಣಗಳನ್ನ ಪೊಲೀಸರು ಪರಿಗಿಣಿಸುವುದಿಲ್ಲ ಎಂದು ಆರೋಪಿಸಿದ್ದಾನೆ. ಸದ್ಯ, ನಾಪತ್ತೆಯಾಗಿರುವ ಕಾಮುಕ ಮಹಿಳೆಯರಿಗೆ ಬಲೆ ಬೀಸಿರುವ ಪೊಲೀಸರು, ಇತರೆ 7 ಪುರುಷರ ಮೇಲೆ ನಡೆದಿರುವ ರೇಪ್ ಕೇಸ್`ನಲ್ಲೂ ಇವರದ್ಧೇ ಕೈವಾಡವೂ ಶಂಕೆ ವ್ಯಕ್ತಪಡಿಸಿದ್ಧಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ