Webdunia - Bharat's app for daily news and videos

Install App

ಅಮ್ಮ ಐ ಲವ್ ಯೂ ಎಂದ ಮೂರು ತಿಂಗಳ ಮಗು

Webdunia
ಗುರುವಾರ, 25 ಮೇ 2017 (10:40 IST)
ಸ್ಕಾಟ್ ಲ್ಯಾಂಡ್: ಕೇವಲ ಮೂರು ತಿಂಗಳ ಅಂದರೆ 13 ವಾರಗಳ ಕಂದಮ್ಮ ಅಮ್ಮನಿಗೆ ಐ ಲವ್ ಯೂ ಎಂದು ಹೇಳಿದರೆ ಆ ಅಮ್ಮನಿಗಾಗುವ ಸಂತಸ-ಸಂಭ್ರಮ ಪದಗಳಲ್ಲಿ ಹೇಳಲಾಗದು. ಇಂತದ್ದೊಂದು ಅಪರೂಪದ ಘಟನೆ ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್ ನಗರದಲ್ಲಿ ನಡೆದಿದೆ.
 
ಕ್ಲೇರ್ ರೀಡ್ ಮತ್ತು ಗ್ರಾಂಟ್ ರೀಡ್ ದಂಪತಿಯ 3 ತಿಂಗಳ ಹೆಣ್ಣು ಮಗು ಎಲ್ಲಿ ರೀಡ್ ತನ್ನ ತಾಯಿ ಐ ಲವ್ ಯೂ ಹೇಳಿದಾಗ ತಾನು ಕೂಡ ಐ ಲವ್ ಯೂ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ಸಾಮಾನ್ಯವಾಗಿ 8 ತಿಂಗಳಾಗುವವರೆಗೆ ಯಾವುದೇ ಮಗು ಒಂದು ಪದವನ್ನೂ ಉಚ್ಛರಿಸುವುದಿಲ್ಲ. ಆದರೆ ಎಲ್ಲಿ ರೀಡ್ ಅಮ್ಮನ ಮಾತನ್ನೇ ಅನುಕರಿಸಿ ಐ ಲವ್ ಯೂ ಹೇಳಿರುವುದು ನಿಜಕ್ಕೂ ಅಚ್ಚರಿ. ಮುದ್ದಾದ ಮಗುವಿನ ಮುದ್ದು ಮಾತು ಕೇಳಿ ಸ್ವತ: ಅಮ್ಮನೇ ಬೆರಗಾಗಿ ಹೋಗಿದ್ದಾಳೆ. ಕ್ಲೇರ್ ರೀಡ್ ಪತಿ ಗ್ರಾಂಟ್ ರೀಡ್ ಗೆ ತಿಳಿಸಿದಾಗ ಈ ವಿಷಯವನ್ನು ಅವರು ನಂಬಿಯೇ ಇಲ್ಲವಂತೆ. ಬಳಿಕ ಕ್ಲೇರ್  ಅದನ್ನು ವಾಟ್ಸಪ್ ಮೂಲಕ ತನ್ನ ಪತಿಗೆ ಕಳುಹಿಸಿದ್ದಾಳೆ. ಈ ವಿಡಿಯೋ ನೋಡಿದ ಗ್ರಾಂಟ್ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ

ವಿಮಾನ ದುರಂತವಾಗಿ ವಾರ ಕಳೆಯುವಷ್ಟರಲ್ಲೇ ಏರ್ ಇಂಡಿಯಾ ಸಿಬ್ಬಂದಿಗಳ ಪಾರ್ಟಿ: ವಿಡಿಯೋ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments