Select Your Language

Notifications

webdunia
webdunia
webdunia
webdunia

ನೇಪಾಳ ದುರಂತ: 168 ಗಂಟೆಗಳ ನಂತರವೂ ಬದುಕುಳಿದ 105ರ ಅಜ್ಜ

ನೇಪಾಳ ದುರಂತ: 168 ಗಂಟೆಗಳ ನಂತರವೂ ಬದುಕುಳಿದ 105ರ ಅಜ್ಜ
ಕಠ್ಮಂಡು , ಭಾನುವಾರ, 3 ಮೇ 2015 (17:32 IST)
ನೇಪಾಳದಲ್ಲಿ ವಿನಾಶಕಾರಿ ಭೂಕಂಪ ನಡೆದು ಬರೊಬ್ಬರಿ 9 ದಿನಗಳು ಕಳೆದಿದ್ದು ಇನ್ನು ಸಹ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರತಿದಿನದ ಕಾರ್ಯಾಚರಣೆ ಈಗ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಹಲವರು ಘಟನೆ ನಡೆದ ಹಲವು ಗಂಟೆಗಳ ನಂತರವೂ ಮೃಂತ್ಯುಜಯರಾಗಿ ಎದ್ದು ಬರುತ್ತಿರುವುದು ಆಶ್ಚರ್ಯವನ್ನು ತರಿಸುತ್ತಿದೆ.

ಕೆಲವು ದಿನಗಳ ಹಿಂದೆ 4 ತಿಂಗಳ ಮಗುವೊಂದು ಅವಶೇಷಗಳಡಿಯಲ್ಲಿ ಜೀವಂತವಾಗಿ ಸಿಕ್ಕಿತ್ತು. ನಂತರ ಒಬ್ಬ ಯುವಕ ಸಹ ಮೂತ್ರ ಕುಡಿದುಕೊಂಡು ಜೀವಂತವಾಗಿ ಉಳಿದಿದ್ದ.
 
ಈಗ 105 ವರ್ಷದ ವೃದ್ದನೊಬ್ಬ ರಕ್ಷಣಾಪಡೆಗೆ ಜೀವಂತವಾಗಿ ಸಿಕ್ಕಿರುವ ಸುದ್ದಿ ಲಭ್ಯವಾಗಿದೆ. ಅದು ಸಹ ಭೂಕಂಪ ನಡೆದ 168 ಗಂಟೆಗಳ ನಂತರ. ನುವಾಕೋಟ ಕಿಮತಾಂಗ್ ಎಂಬ ಗ್ರಾಮದಲ್ಲಿ ಅವಶೇಷಗಳಡಿ ಸಿಲುಕಿದ್ದ ಅಜ್ಜನನ್ನು ರಕ್ಷಣಾ ಪಡೆ ರಕ್ಷಿಸಿದೆ. 
 
ಅಷ್ಟೇ ಅಲ್ಲದೇ 120 ಗಂಟೆಗಳ ಕಾಲ ಕಟ್ಟಡಗಳ ಅಡಿ ಸಿಲುಕಿದ್ದ ಯುವಕನೊಬ್ಬನನ್ನು ಸಹ  ರಕ್ಷಣೆ ಮಾಡಲಾಗಿದೆ. ಅವರಿಬ್ಬರನ್ನು ಸಹ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
 
ನೇಪಾಳದ ಅಧಿದೇವತೆ ಎಂದು ಕರೆಯಲ್ಪಡುವ ಬಾಲದೇವತೆಯ ಅರಮನೆ ಸಹ ಯಾವುದೇ ಅಪಾಯಗಳಿಲ್ಲದೇ ಸುರಕ್ಷಿತವಾಗಿರುವುದು ಸಹ ಆಶ್ಚರ್ಯಕ್ಕೆ ಕಾರಣವಾಗಿದೆ.

Share this Story:

Follow Webdunia kannada