Select Your Language

Notifications

webdunia
webdunia
webdunia
webdunia

100ಕ್ಕೂ ಹೆಚ್ಚು ಶಾಲಾಬಾಲಕಿಯರ ಅಪಹರಣ, ಬಿಡುಗಡೆ

100ಕ್ಕೂ ಹೆಚ್ಚು ಶಾಲಾಬಾಲಕಿಯರ ಅಪಹರಣ, ಬಿಡುಗಡೆ
, ಗುರುವಾರ, 17 ಏಪ್ರಿಲ್ 2014 (15:35 IST)
PR
PR
ಬಂಧೂಕುದಾರಿಗಳು ಅಪಹರಿಸಿದ 100ಕ್ಕೂ ಹೆಚ್ಚು ನೈಜೀರಿಯಾ ಶಾಲಾಮಕ್ಕಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಮಕ್ಕಳನ್ನು ಮುಸ್ಲಿಂ ಭದ್ರಕೋಟೆಯ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. 129 ಶಾಲಾಬಾಲಕಿಯರನ್ನು ಅಪಹರಿಸಿ ಈಶಾನ್ಯ ಬೋರ್ನೊಗೊ ಒಯ್ಯಲಾಗಿದ್ದು, 8 ಬಾಲಕಿಯರನ್ನು ಹೊರತು ಪಡಿಸಿ ಉಳಿದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ.ಕೆಲವು ಬಾಲಕಿಯರು ಬಿಡುಗಡೆಗೆ ಮುಂಚಿತವಾಗಿ ತಪ್ಪಿಸಿಕೊಂಡಿದ್ದರು. ಅಪಹೃತ ಬಾಲಕಿಯರನ್ನು ಇಸ್ಲಾಂ ತೀವ್ರವಾದಿ ಗುಂಪು ಬೋಕೋ ಹರಾಂ ಪ್ರದೇಶಕ್ಕೆ ಒಯ್ಯಲಾಗಿತ್ತು.

ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಸಂಭವಿಸಿದ ಬಾಂಬ್ ದಾಳಿಗೆ ಬೋಕೋ ಹರಾಂ ಗುಂಪು ಕಾರಣವೆಂದು ನೈಜೀರಿಯಾದ ಅಧಿಕಾರಿಗಳು ಆರೋಪಿಸಿದ್ದು, ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಮಾಹಿತಿ ನೀಡುವವರಿಗೆ 300,000 ಡಾಲರ್ ಬಹುಮಾನವನ್ನು ಘೋಷಿಸಿದ್ದಾರೆ. ಕಳೆದ ಮಂಗಳವಾರ ಬಂಧೂಕುದಾರಿಗಳು ಕಟ್ಟಡಗಳಿಗೆ ಬೆಂಕಿಹಚ್ಚಿ ಸರ್ಕಾರಿ ಬಾಲಕಿಯರ ಸೆಕೆಂಡರಿ ಶಾಲೆಯಲ್ಲಿ ಕಾವಲುಗಾರರ ಮೇಲೆ ಗುಂಡುಹಾರಿಸಿ ಶಾಲೆಯೊಳಗೆ ಪ್ರವೇಶಿಸಿದರು. ನಂತರ ನೂರಾರು ಶಾಲಾಬಾಲಕಿಯರನ್ನು ಟ್ರಕ್‌ಗಳಿಗೆ ತುಂಬಿ ಒಯ್ಯುತ್ತಿದ್ದಾಗ, ಕೆಲವು ಬಾಲಕಿಯರು ವಾಹನಗಳಿಂದ ಕೆಳಕ್ಕೆ ಹಾರಿದ್ದರು.

Share this Story:

Follow Webdunia kannada