Select Your Language

Notifications

webdunia
webdunia
webdunia
webdunia

ಹುಷಾರ್‌‌.. ಭಾರತ 4,144 ಫೇಸ್‌ಬುಕ್‌ ಬಳಕೆದಾರರ ವಿವರ ಕೇಳಿದೆ

ಹುಷಾರ್‌‌.. ಭಾರತ 4,144 ಫೇಸ್‌ಬುಕ್‌ ಬಳಕೆದಾರರ ವಿವರ ಕೇಳಿದೆ
ನವದೆಹಲಿ , ಬುಧವಾರ, 28 ಆಗಸ್ಟ್ 2013 (13:33 IST)
PTI
PTI
‘ನೀವು ಫೇಸ್‌ಬುಕ್ ಬಳಸುತ್ತಿದ್ದೀರ? ಹಾಗಾದ್ರೆ ನಿಮ್ಮ ಮೇಲೆ ಭಾರತ ಸರ್ಕಾರ ಕಣ್ಣಿಟ್ಟಿದೆ. ನಿಮಗೆ ಗೊತ್ತಿಲ್ಲದೇ ನಿಮ್ಮ ಪ್ರತಿಯೊಂದು ಕಮೆಂಟ್‌ಗಳನ್ನು ಸ್ಟೇಟಸ್‌ಗಳನ್ನು ಗಮನಿಸುತ್ತಲೇ ಇದೆ. ಆದರೆ ಭಾರತ ಸರ್ಕಾರ ಇದೆಲ್ಲವನ್ನು ಗುಪ್ತವಾಗಿ ನಡೆಸ್ತಾ ಇದೆ. ನೀವೇನಾದ್ರೂ ಫೇಸ್‌ಬುಕ್‌ ಇಟ್ಟುಕೊಂಡು ಡಬಲ್‌ಗೇಮ್ ಆಡಿದ್ರೆ, ಹುಷಾರ್‌... ಪಕ್ಕಾ ತಗಲಾಕೊಳ್ತೀರ.. ಯಾಕಂದ್ರೆ ಇದೀಗ 4,144 ಫೇಸ್‌ಬುಕ್ ಬಳಕೆದಾರರ ಡಾಟಾ ವಿವರಗಳನ್ನು ಭಾರತ ಕೇಳಿದೆ.

2013 ನೇ ವರ್ಷದ ಆರಂಭದಿಂದ ಅಂದರೆ ಜನವರಿಯಿಂದ ಜೂನ್‌ ತಿಂಗಳವರೆಗೆ ಫೇಸ್‌ಬುಕ್‌ ಬಳಸಿದ 4,144 ಬಳಕೆದಾರರ ಮೇಲೆ ಇದೀಗ ಸರ್ಕಾರ ಕಣ್ಣು ಬಿದ್ದಿದೆ. ಹೀಗಾಗಿ ಗುಪ್ತವಾಗಿ ಅವರ ಎಲ್ಲಾ ಡಾಟಾವನ್ನು ಕಲೆ ಹಾಕುವಲ್ಲಿ ಇದೀಗ ಸರ್ಕಾರ ಮುಂದಾಗಿದೆ.

ಭಾರತ ಸೇರಿದಂತೆ 74 ದೇಶಗಳು ಫೇಸ್‌ಬುಕ್‌ ಬಳಕೆದಾರರ ಡಾಟಾ ವಿವರಗಳನ್ನು ನೀಡುವಂತೆ ಫೇಸ್‌ಬುಕ್‌ಗೆ ಕೋರಿಕೆ ಸಲ್ಲಿಸಿವೆ. ವಿಶ್ವದಾದ್ಯಂತ ಒಟ್ಟು 37,954 ಬಳಕೆದಾರರ ವಿವರಗಳನ್ನು ಕೋರಿ ಫೇಸ್‌ಬುಕ್‌ ಗೆ ಮನವಿಗಳು ಬಂದಿವೆ. ಅದರಲ್ಲಿ ಅಮೇರಿಕಾ ದೇಶವೇ ಅಗ್ರಸ್ಥಾನದಲ್ಲಿದ್ದು, ಒಟ್ಟು 11,000 ಬಳಕೆದಾರರ ವಿವರಗಳನ್ನು ಅಮೇರಿಕಾ ಕೇಳಿದೆ. ಎರಡನೆಯ ಸ್ಥಾನವನ್ನು ಭಾರತ ಆಕ್ರಮಿಸಿಕೊಂಡಿದ್ದು, 4,144 ಬಳಕೆದಾರರ ವಿವರಗಳನ್ನು ಕೇಳಿದೆ. ಇನ್ನು 1,975 ಬಳಕೆದಾರರ ವಿವರಗಳನ್ನು ಕೇಳಿದ ಯುಕೆ ಮೂರನೇ ಸ್ಥಾನದಲ್ಲಿದೆ.

ಹುಷಾರ್‌ ಕಣ್ರಿ.. ಯಾರಿಗೆ ಗೊತ್ತು..? ಭಾರತ ಕೇಳಿದ 4,144 ಫೇಸ್‌ಬುಕ್‌ ಬಳಕೆದಾರರಲ್ಲಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಕೂಡ ಇರಬಹುದು..!

Share this Story:

Follow Webdunia kannada